ಸರ್ಕಾರದ ವರ್ತನೆಗೆ ಪ್ರತಿಪಕ್ಷ ಸದಸ್ಯರು ಧಿಕ್ಕಾರ ಕೂಗಿದರು. 
ಜಿಲ್ಲಾ ಸುದ್ದಿ

ಮಾರ್ಚ್ ಒಳಗೆ ಕಬ್ಬಿನ ಬಾಕಿ ಅಸಾಧ್ಯ

ಉಳಿದ ಹಣವನ್ನು ಮಾರ್ಚ್ ತಿಂಗಳೊಳಗೆ ಕೊಡುವಂತೆ ಸರ್ಕಾರದಿಂದ ಸೂಚನೆ ನೀಡಲು ಅಸಾಧ್ಯ...

ವಿಧಾನಸಭೆ: ಮಾರ್ಚ್ ತಿಂಗಳೊಳಗೆ ಕಬ್ಬು ಬೆಳೆಗಾರರ ಅಂತಿಮ ಕಂತಿನ ರೂ.200 ಹಣ ಸಿಗಲು ಸಾಧ್ಯವೇ ಇಲ್ಲ!

ಡಿಸೆಂಬರ್ ಅಂತ್ಯದೊಳಗೆ ಎಲ್ಲ ರೈತರಿಗೂ ಪ್ರತಿ ಟನ್ ಕಬ್ಬಿಗೆ ರೂ.2300 ಅನ್ನು ಸಕ್ಕರೆ ಕಾರ್ಖಾನೆಗಳು ನೀಡಲಿವೆ. ಉಳಿದ ಹಣವನ್ನು ಮಾರ್ಚ್ ತಿಂಗಳೊಳಗೆ ಕೊಡುವಂತೆ ಸರ್ಕಾರದಿಂದ ಸೂಚನೆ ನೀಡಲು ಅಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಪಪಡಿಸಿದ್ದಾರೆ.

ರಾಜ್ಯ ಸರ್ಕಾರದ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ, ಜೆಡಿಎಸ್ ಸದಸ್ಯರು ಧರಣಿ ಮುಂದುವರಿಸಿ, ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತ ಚರ್ಚೆ ಮುಂದುವರಿಸಲು ಅವಕಾಶ ನೀಡುವ ಸಲುವಾಗಿ ಸಭಾತ್ಯಾಗ ನಡೆಸಿದರು.

ಸರ್ಕಾರದ ಉತ್ತರಕ್ಕೆ ಪ್ರತಿಪಕ್ಷಗಳ ಜತೆ ಸಭಾಧ್ಯಕ್ಷರೂ ಬೇಸರ ವ್ಯಕ್ತಪಡಿಸಿದರು. ನಿದಿಷ್ಟ ಸಮಯದಲ್ಲಿ ರೈತರಿಗೆ ಹಣ ನೀಡುವ ಬಗ್ಗೆ ಕೊನೆಗೂ ಸರ್ಕಾರ ಸ್ಪಷ್ಟ ಉತ್ತರ ನೀಡಲಿಲ್ಲ. ಇದಲ್ಲದೇ ಬಾಕಿ ರೂ.200ನ್ನು 2 ಕಂತುಗಳಲ್ಲಿ ಕೊಡಿಸುವ ಭರವಸೆ ನೀಡಿದೆ.

ಮತ್ತೊಂದೆಡೆ ಈವರೆಗೆ ಯಾವ್ಯಾವ ಸಕ್ಕರೆ ಕಾರ್ಖಾನೆಗಳು ಎಷ್ಟು ಹಣ ನೀಡಿವೆ ಪಟ್ಟಿ ನೀಡಿ ಎಂದು ಸದಸ್ಯರು ಪ್ರಶ್ನಿಸಿದರೂ ಸಕ್ಕರೆ ಸಚಿವ ನೀಡಲಿಲ್ಲ.

ಸರ್ಕಾರದ ಈ ವರ್ತನೆಗೆ ಪ್ರತಿಪಕ್ಷ ಸದಸ್ಯರು ಧಿಕ್ಕಾರ ಕೂಗಿದರು. ಸಕ್ಕರೆ ಕಾರ್ಖಾನೆ ಲಾಬಿಗೆ ಸರ್ಕಾರ ಮಣಿದಿದೆ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!

'ಮತದಾರರ ಪಟ್ಟಿ ಪರಿಷ್ಕರಣೆ'ಯಲ್ಲಿ ಅಕ್ರಮ ಆರೋಪ; CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ, INDIA ಒಕ್ಕೂಟದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಆರಂಭ..!

ಶಾಲೆಗಳಲ್ಲಿ ಸಂವಿಧಾನದ ಪ್ರಸ್ತಾವನೆ ಪಠಣೆ: ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್!

9/11 ಮಾದರಿಯಲ್ಲೇ ಇಸ್ರೇಲ್ ಧ್ವಂಸಕ್ಕೆ ಸಂಚು..! ಫ್ಲೈದುಬೈ ಏರ್‌ಲೈನ್ಸ್ ಸೇರಿದ್ದೇ ಆ ಕ್ರೂರ ಉದ್ದೇಶಕ್ಕಾಗಿ; ಸತ್ಯ ಬಾಯಿಬಿಟ್ಟ ಕಿಲ್ಲರ್ ಪೈಲಟ್ ಹಮಾಮ್..!