ಬೆಂಗಳೂರು: ಹಿರಿಯ ನಾಗರೀಕರಿಗೆ ಬೆಂಗಳೂರು ಅಸುರಕ್ಷಿತ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಇಟ್ಟಮಡುವಿನಲ್ಲಿ ವಾಸವಿದ್ದ ನಿವೃತ್ತ ನ್ಯಾಯಾಂಗ ಅಧಿಕಾರಿ ರಾಘವೇಂದ್ರ ರಾವ್ (70) ಎಂಬುವವರನ್ನು ದುಷ್ಕರ್ಮಿಗಳು ರಾಡ್‌ನಿಂದ್ ಹೊಡೆದು ಕೊಲೆ ಮಾಡಿದ್ದಾರೆ. ಅವರ ಪತ್ನಿ ಸುಧಾಕುಮಾರಿ ಎಂಬುವವರ ಮೇಲೂ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಾಘವೇಂದ್ರ ರಾವ್ ಪತ್ನಿಯೊಂದಿಗೆ ಇಟ್ಟಮಡು 10ನೇ ಕ್ರಾಸ್‌ನಲ್ಲಿ ವಾಸವಾಗಿದ್ದರು. ಮನೆಯ ಬಳಿ ಇರುವ ಅಪಾರ್ಟ್‌ಮೆಂಟ್‌ನಲ್ಲಿ ಮಗ ಮಧಸೂದನ್ ಕುಟುಂಬದೊಂದಿಗೆ ವಾಸವಿದ್ದಾರೆ. ಬುಧವಾರ ರಾತ್ರಿ 7.30ರ ಸುಮಾರಿಗೆ ಮನೆಗೆ ಹೋದರು. ಅಡುಗೆ ಕೋಣೆಯಲ್ಲಿ ರಕ್ತದ ಮಡುವಿನಲ್ಲಿ ಬಿದಿದ್ದ ತಂದೆ ತಾಯಿಯನ್ನು ಆಸ್ಪತ್ರೆಗೆ ಸಾಗಿಸಿದರು. ಅಷ್ಟರಲ್ಲಾಗಲೇ ತಂದೆ ಮೃತಪಟ್ಟಿದ್ದರು.
ಪರಿಚಿತರ ಕೃತ್ಯ?
ಸುಧಾಕುಮಾರಿ ಹಾಕಿಕೊಂಡಿದ್ದ 30 ಗ್ರಾಂ ಮಾಂಗಲ್ಯವನ್ನು ದುಷ್ಕರ್ಮಿಗಳು ದೋಚಿಕೊಂಡು ಹೋಗಿದ್ದಾರೆ. ಚನ್ನಮ್ಮನಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದುಷ್ಕರ್ಮಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ.