ಬೆಂಗಳೂರು: ಬೆಂಗಳೂರು ದೇಶದ 4ನೇ ಅತಿ ದೊಡ್ಡ ವಾಣಿಜ್ಯ ಕೇಂದ್ರ!
ಇಬೇ ಇಂಡಿಯಾ ಸಂಸ್ಥೆಯ 2014ರ ಸಮೀಕ್ಷೆ ಅಂಕಿ-ಅಂಶಗಳು ಇದನ್ನು ಬಹಿರಂಗಪಡಿಸಿವೆ. ಸಂಸ್ಥೆ ಕೈಗೊಂಡಿರುವ ಸಮೀಕ್ಷೆಯಲ್ಲಿ 28 ರಾಜ್ಯ, 7 ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಂತರ್ಜಾಲ ಖರೀದಿ ವಹಿವಾಟು ಹಾಗೂ ರಪ್ತು ಹಾಗೂ ವಿಶ್ವದಲ್ಲಿನ 206 ರಾಷ್ಟ್ರಗಳೊಂದಿಗಿನ ರಫ್ತಿನ ಪ್ರಯಾಣ ಲಭ್ಯವಾಗಿದೆ.
ದೆಹಲಿ ವಾಣಿಜ್ಯ ನಗರಿಯಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಅತಿ ಹೆಚ್ಚು ಮೊಬೈಲ್ ಹಾಗೂ ಆಕ್ಸಸರೀಸ್‌ಗಳ ಮಾರಾಟ ದೆಹಲಿಯಲ್ಲಿ ಅಧಿಕವಾಗಿದೆ.
ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಹಾಗೂ ಕ್ಯಾಮರಾದಂಥ ಎಲೆಕ್ಟ್ರಾನಿಕ್ ಉತ್ಪನ್ನಗಳ ಮಾರಾಟ ಹೆಚ್ಚಿರುವುದರಿಂದ ಬೆಂಗಳೂರು 4ನೇ ಸ್ಥಾನ ಗಳಿಸಿದೆ. ಇ-ಬೇಯಿಂದ ಮಾರಾಟವಾಗುತ್ತಿರುವ ಸರಕುಗಳಲ್ಲಿ ಶೇ. 47 ರಷ್ಟು ಎಲೆಕ್ಟ್ರಾನಿಕ್, ಶೇ. 45 ರಷ್ಟು ಲೈಫ್‌ಸ್ಪೈಲ್ ಉತ್ಪನ್ನಗಳು ಸ್ಥಾನ ಪಡೆದಿದೆ ಎಂದು ಸಮೀಕ್ಷೆ ತಿಳಿಸಿದೆ.