ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ವೇಷ ತೊಟ್ಟ ೫೬೪ ಪೊಲೀಸರು: ಆಸೆಬುರುಕ ಆಟೋ ಚಾಲಕರಿಗೆ ದಂಡ

ರೈತರ, ಟೆಕ್ಕಿಗಳ, ಉದ್ದಿಮೆದಾರರ ಹಾಗೂ ಬೇರೆ ರಾಜ್ಯಗಳಿಂದ ಬಂದ ವಲಸಿಗರ

ಬೆಂಗಳೂರು: ರೈತರ, ಟೆಕ್ಕಿಗಳ, ಉದ್ದಿಮೆದಾರರ ಹಾಗೂ ಬೇರೆ ರಾಜ್ಯಗಳಿಂದ ಬಂದ ವಲಸಿಗರ ಹಾಗೆ ವೇಷ ತೊಟ್ಟ ಸಂಚಾರಿ ಪೊಲೀಸರು, ಮೋಸ ಮಾಡಿ ದುಡ್ಡು ಸುಲಿಯುವ ಆಟೋ ಚಾಲಕರನ್ನು ಸೋಮವಾರ ಹಿಡಿದಿದ್ದಾರೆ.

ಒಂದು ಇಡೀ ದಿನದ ಈ ಕಾರ್ಯಾಚರಣೆಯಲ್ಲಿ, ೫೬೪ ಜನ ಪೊಲೀಸರು ನಾಗರಿಕ ವೇಷ ತೊಟ್ಟು, ಪ್ರಯಾಣಿಕರೆಂದು ಹೇಳಿ ಆಟೋ ಚಾಲಕರನ್ನು ಹಿಡಿದಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಒಟ್ಟು ೫೧೭೨ ಪ್ರಕರಣಗಳನ್ನು ದಾಖಲಿಸಿದ್ದು, ೯೩೨ ಆಟೋಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಸಾಮಾನ್ಯವಾಗಿ ಬೇರೆ ಊರುಗಳಿಂದ ಬಸ್ ಗಳು ನಗರಕ್ಕೆ ಬೆಳಗ್ಗೆ ಬರುವ ಹೊತ್ತು ೫ ಘಂಟೆಗೆ ಈ ಕಾರ್ಯಾಚರಣೆ ಪ್ರಾರಂಭವಾಗಿ, ಸಂಜೆ ಕಛೇರಿಗಳಿಂದ ಜನರು ಮನೆಗೆ ತೆರಳುವ ಸಮಯ ೬ ಘಂಟೆಯವರೆಗೂ ನಡೆದಿದೆ.

ಮೆಜೆಸ್ಟಿಕ್, ನಗರ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳು ಮತ್ತು ಮಾಲ್ ಗಳ ಹತ್ತಿರ ಈ ಕಾರ್ಯಾಚರಣೆ ನಡೆದಿದೆ.

ಕೆಲವರು ಕೇಳಿದ ಕಡೆ ಬರಲು ನಿರಾಕರಿಸಿದರೆ, ಹಲವು ಚಾಲಕರು ದುಬಾರಿ ದುಡ್ಡಿಗೆ ಬೇಡಿಕೆಯಿಟ್ಟಿದ್ದಾರೆ. ಇನ್ನಿತರ ಅಪರಾಧಗಳು ಹೀಗಿವೆ: ಮೀಟರ್ ಹಾಕದೆ ಇರುವುದು, ವಾಹನ ಚಾಲಕನ ಗುರತಿನ ಚೀಟಿಗಳನ್ನು ಪ್ರದರ್ಶಿಸದಿರುವುದು, ಸಮವಸ್ತ್ರ ತೊಡದೆ ಇರುವುದು, ಸಾರಿಗೆ ನಿಯಮಗಳನ್ನು ಮುರಿದಿರುವುದು. "ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚೆಚ್ಚು ಜನ ದೂರು ಹಾಕುತ್ತಿರುವುದು ಅಲ್ಲದೆ ನಮ್ಮ ಸಹಾಯವಾಣಿಗೆ ಹಲವಾರು ಕರೆಗಳು ಬರುತ್ತಿದ್ದವು" ಎಂದ ಹಿರಿಯ ಪೊಲೀಸ್ ಅಧಿಕಾರಿ "ಆದುದರಿಂದ ನಾವು ಈ ಕಾರ್ಯಾಚರಣೆ ನಡೆಸಿ ಕೆಟ್ಟದಾಗಿ ವರ್ತಿಸುವ ಹಲವಾರು ಚಾಲಕರನ್ನು ಹಿಡಿದಿದ್ದೇವೆ" ಎಂದಿದ್ದಾರೆ. ಈ ತಪಾಸಣೆ ವೇಳೆಯಲ್ಲಿ ಸರಿಯಾದ ದಾಖಲೆಗಳಿಲ್ಲದ ೯೩೨ ಆಟೋಗಳನ್ನು ವಶ ಪಡಿಸಿಕೊಂಡಿದ್ದಾರೆ. ಇವರಲ್ಲಿ ಹಲವರು ವಾಹನ ಚಾಲನೆ ಪರವಾನಗಿ ಕೂಡ ಹೊಂದಿರಲಿಲ್ಲ. "ಕೂಡಲೇ ಇವರ ನೊಂದಣಿಯನ್ನು ರದ್ದು ಮಾಡುವಂತೆ ರಸ್ತೆ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ನಮ್ಮ ಕಾರ್ಯಾಚರಣೆ ಇನ್ನೂ ಕೆಲವು ದಿನ ಮುಂದುವರೆಯುತ್ತದೆ" ಎಂದಿದ್ದಾರೆ.

ಜಯನಗರದಲ್ಲಿ ಕೆಲ ಆಟೋ ಚಾಲಕರು ಪ್ರತಿಭಟನೆ ನಡೆಸಿ, ವಶ ಪಡಿಸಿಕೊಂಡಿರುವ ತಮ್ಮ ಆಟೋಗಳನ್ನು ಹಾಗು ದಾಖಲೆಗಳನ್ನು ಹಿಂದಿರುಗಿಸುವಂತೆ ಆಗ್ರಹಿಸಿದರು. ಆದರೆ ಪೊಲೀಸರು ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಿರುವುದನ್ನು ತಿಳಿದು ಪ್ರತಿಭಟನೆ ಹಿಂತೆಗೆದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

ಮತ ಬೇಟೆ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ

ಕೋಟಿ ಕೋಟಿ ಲೂಟಿ: ಅರಣ್ಯ ಇಲಾಖೆ ಮಾಜಿ ಅಧಿಕಾರಿಗೆ ಕೋರ್ಟ್ ಶಾಕ್; ಬರೋಬ್ಬರಿ 1.38 ಕೋಟಿ ದಂಡ, 3 ವರ್ಷ ಜೈಲು ಶಿಕ್ಷೆ..!