ಜಿಲ್ಲಾ ಸುದ್ದಿ

ನಗರದಲ್ಲಿ ಇನ್ನು ಸರಕು-ಸಾಗಣೆ ವಾಹನ ನಿರ್ಬಂಧ

ವಾಹನಗಳ ಸುಗಮ ಸಂಚಾರಕ್ಕೆ...

ಬೆಂಗಳೂರು: ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿರುವುದರ ಜತೆಗೆ ವಾಯು ಮಾಲಿನ್ಯ ಮತ್ತು ಶಬ್ದಧ ಮಾಲಿನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದ ಒಳ ಭಾಗದ ರಸ್ತೆಗಳಲ್ಲಿ ಸರಕು-ಸಾಗಣೆ ವಾಹನಗಳ ಮೇಲೆ ನಗರ ಪೊಲೀಸರು ನಿರ್ಬಂಧ ಹೇರಿದ್ದಾರೆ.

ಇದೇ ವೇಳೆ, ವಿಧಾನ ಸೌಧದ ಸುತ್ತ ಮುತ್ತಲ 2 ಕಿಲೋ ಮೀಟರ್ ಆವೃತ್ತದಲ್ಲಿ ಎಲ್ಲ ರೀತಿಯ ಸರಕು ಸಾಗಣೆ ವಾಹನ ಸಂಚಾರವನ್ನು 24 ಗಂಟೆಗಳ ಕಾಲವೂ ನಿಷೇಧಿಸಲಾಗಿದೆ.

ಉಳಿದಂತೆ ನಗರ ವ್ಯಾಪ್ತಿಯ ಹಲವೆಡೆ ಮೂರು ಟನ್‌ಗಿಂತಲೂ ಹೆಚ್ಚು ಭಾರ ಹೊರುವ ವಾಹನಗಳ ಪ್ರವೇಶವನ್ನು ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಿರ್ಬಂಧಿಸಲಾಗಿದೆ.

ಹಾಲಿನ ಉತ್ಪನ್ನ, ಔಷಧ, ಆಮ್ಲಜನಕದ ಸಿಲಿಂಡರ್, ಜೈವಿಕ ವೈದ್ಯ ತಾಜ್ಯ, ಪೆಟ್ರೋಲ್, ಡಿಸೇಲ್, ಸೀಮೆಎಣ್ಣೆ ಶಾಲೆಗಳಿಗೆ ಮಧ್ಯಾಹ್ನದ ಬಿಸಿ ಊಟ ವಿತರಿಸುವ ವಾಹನ, ಎಲ್‌ಪಿಜಿ ಸಿಲಿಂಡರ್, ಸಿಎನ್‌ಜಿ ಟ್ಯಾಂಕರ್, ರಕ್ಷಣಾ ವಿಭಾಗದ ಬಾರೀ ಸರಕು ಸಾಗಣೆ ವಾಹನಗಳು, ಪೋಸ್ಟ್ ಮತ್ತು ಟೆಲಿಗ್ರಾಫ್, ರೆಡಿಮಿಕ್ಸ್ ಕಾಂಕ್ರೀಟ್ ವಾಹನಗಳು ಬೆಳಗ್ಗೆ 8 ಗಂಟೆಯಿಂದ 11 ಗಂಟೆ ಮತ್ತು ಸಂಜೆ 4 ಗಂಟೆಯಿಂದ ರಾತ್ರಿ 8 ಗಂಟೆಯವರಗೆ ಹೊರತುಪಡಿಸಿ ಉಳಿದ ವೇಳೆಗಳಲ್ಲಿ ಸಂಚರಿಸುವ ಅವಕಾಶವಿದೆ.

ನೀರು, ಕಸ, ಪೊಲೀಸ್ ವಾಹನ, ಮಿಲಿಟರಿ ಹಾಗೂ ಶವ ಸಾಗಿಸುವ ವಾಹನಗಳಿಗೆ ನಿರ್ಬಂಧವಿಲ್ಲ. ಯಾವುದೇ ಅನುಮತಿ ಪಡೆಯುವ ಅವಶ್ಯಕತೆ ಇರುವುದಿಲ್ಲವೆಂದು ನಗರ ಪೊಲೀಸ್ ಆಯುಕ್ತ ಎಂ.ಎನ್ ರೆಡ್ಡಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಒಂದೇ ಒಂದು ಕಲ್ಲು ಇಡೋಕೂ ಬಿಡಲ್ಲ': ತಮಿಳುನಾಡು ಸಚಿವ ಆನಂದ್ ಕ್ಯಾತೆ

ಫುಟ್‌ಪಾತ್‌ ಮೇಲೆ ಮತ್ತೆ ಅಂಗಡಿ ಹಾಕಿದ್ರೆ ಸಾಮಗ್ರಿಗಳನ್ನ ಜಪ್ತಿ ಮಾಡಿ, ದುಪ್ಪಟ್ಟು ದಂಡ ವಿಧಿಸಿ: ಕೃಷ್ಣ ಬೈರೇಗೌಡ ಖಡಕ್ ಸೂಚನೆ

'ಪ್ರಧಾನಿಗೆ ನಿಜವಾದ ಕಾಳಜಿ ಇದ್ದರೆ ಸರ್ಕಾರಿ ಶಾಲೆಗಳ ಸುಧಾರಣೆಗೆ 'ಪಿಎಂ ಕೇರ್ಸ್ ಫಂಡ್' ಬಳಸಲಿ: ಅಭಿಜಿತ್ ದೀಪ್ಕೆ ಆಗ್ರಹ

'ಪ್ರತಿಯೊಬ್ಬರಿಗೂ ಕಾರು, ತಿಂಗಳಿಗೆ ₹1 ಲಕ್ಷ ಭತ್ಯೆ': ರಾಜ್ಯದ 234 ಶಾಸಕರಿಗೆ ಭರ್ಜರಿ ಕೊಡುಗೆ ಘೋಷಿಸಿದ ತಮಿಳುನಾಡು CM ವಿಜಯ್!

Ind Vs SL: ಮಾನವ್ ಸುತಾರ್ ದಾಖಲೆ; 600ನೇ ಟೆಸ್ಟ್ ಪಂದ್ಯದ ಗೆದ್ದು ಸಂಭ್ರಮಿಸಿದ ಟೀಂ ಇಂಡಿಯಾ!