ಹೊಸವರ್ಷ ಸಂಭ್ರಮಾಚರಣೆ 
ಜಿಲ್ಲಾ ಸುದ್ದಿ

ಹೊಸವರ್ಷ ಸಂಭ್ರಮಾಚರಣೆ: ರಾತ್ರಿ 2ಗಂಟೆ ವರೆಗೆ ಬಾರ್-ರೆಸ್ಟೋರೆಂಟ್‌ ಓಪನ್

ಅಬಕಾರಿ ಇಲಾಖೆಯ ಅನುಮತಿ ಪಡೆಯುವಂತೆಯೂ ಆದೇಶದಲ್ಲಿ ಸೂಚಿಸಲಾಗಿದ್ದೆ...

ಬೆಂಗಳೂರು: ಹೊಸ ವರ್ಷವನ್ನು ಸ್ವಾಗತಕ್ಕೆ ಬೆಂಗಳೂರು ಸಿಂಗಾರಗೊಳ್ಳುತ್ತಿದ್ದು, ವಿಶೇಷ ಆಚರಣೆ ಕಾರ್ಯಕ್ರಮಗಳಿಗೆ ವೇದಿಕೆಯಾಗುತ್ತಿದೆ. ನೂತನ ವರ್ಷಾಚರಣೆ ಹಿನ್ನೆಲೆಯಲ್ಲಿ ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ಮಧ್ಯರಾತ್ರಿ 2 ಗಂಟೆಯವರೆಗೆ ಅಂದರೆ ಜ.1 ರ ಬೆಳಗಿನ ಜಾವ 2 ಗಂಟೆಯವರೆಗೆ ತೆರೆಯಲು ಪೊಲೀಸ್ ಇಲಾಖೆ ಅನುಮತಿ ನೀಡಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ವಿವರ ನೀಡಿದರು. ಡಿ.31 ರಾತ್ರಿ ಜನವರಿ 1.ರ ಬೆಳಗಿನ ಜಾವದವರೆಗೆ ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.

ಈ ಸಂಬಂಧ ಆದೇಶ ಹೊರಡಿಸಲಾಗಿದೆ. ಬಾರ್‌ಗಳನ್ನು ಅಂದು ಬೆಳಗಿನ ಜಾವದವರೆಗೂ ತೆರೆದಿರಲು ಅಬಕಾರಿ ಇಲಾಖೆಯ ಅನುಮತಿ ಪಡೆಯುವಂತೆಯೂ ಆದೇಶದಲ್ಲಿ ಸೂಚಿಸಲಾಗಿದ್ದೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಅಲೋಕ್ ಕುಮಾರ್, ನೂತನ ಸಂಭ್ರಮಾಚರಣೆ ವೇಳೆ ಮದ್ಯಪಾನ ಮಾಡಿ, ವಾಹನ ಚಲಿಸದಂತೆ ಆದೇಶಿಸಲಾಗಿದ್ದು, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

ಸಂಪುಟ ಸಲಹೆ ಮೇರೆಗೆ KPSC ಅಧ್ಯಕ್ಷ ಸಾಹುಕಾರ್ ರನ್ನು ಮತ್ತೆ ಅಮಾನತು ಮಾಡಿದ ರಾಜ್ಯಪಾಲ ಗೆಹ್ಲೋಟ್!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!

SIR ವೇಳೆ 1.08 ಕೋಟಿಗೂ ಅಧಿಕ ಮತದಾರರು ASDDO ಪಟ್ಟಿಗೆ: ಆಕ್ಷೇಪಣೆ ಸಲ್ಲಿಕೆ ಅವಧಿ ವಿಸ್ತರಿಸಬೇಕು- CECಗೆ ಸಿಎಂ ಶಿವಕುಮಾರ್ ಪತ್ರ!

ಕನಸು ಕೊನೆಗೂ ನನಸು: ಲಿಂಗ ಬದಲಿಸಿಕೊಂಡಿದ್ದ Anaya Bangarಗೆ ಕ್ರಿಕೆಟ್‌ಗೆ ಮರಳಲು ಗ್ರೀನ್ ಸಿಗ್ನಲ್!