ಮೋರ್ ಮೆಗಾಸ್ಟೋರ್‍ನಿಂದ 100 ಅಡಿ ಉದ್ದದ ಪಿಜ್ಜಾ ತಯಾರಿಕೆ
ಬೆಂಗಳೂರು: ಆದಿತ್ಯ ಬಿರ್ಲಾ ರಿಟೇಲ್ ಲಿ. ಒಡೆತನದ ಮೋರ್ ಮೆಗಾಸ್ಟೋರ್ ಈ ಹಬ್ಬದ ಸಂದರ್ಭದಲ್ಲಿ ತನ್ನ ಗ್ರಾಹಕರಿಗಾಗಿ ಭಾನುವಾರ ಅದ್ಭುತ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಈ ಜನಪ್ರಿಯ ಹೈಪರ್‍ಮಾರ್ಕೆಟ್ ಚೈನ್ 100 ಅಡಿ ಉದ್ದದ ತಾಜಾ ಪಿಜ್ಜಾವನ್ನು ತನ್ನ ಮಹಾದೇವಪುರ ಸ್ಟೋರ್‍ನಲ್ಲಿ ತಯಾರಿಸಲಾಗಿತ್ತು.
ಇದೇ ಮೊದಲ ಬಾರಿಗೆ ಈ ವಿನೂತನ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಗ್ರೇಟ್ ಇಂಡಿಯನ್ ಬೇಕರಿ ಫೆಸ್ಟಿವಲ್ ಗಮನದಲ್ಲಿರಿಸಿಕೊಂಡು ಈ ಕಲ್ಪನೆ ಮೈದಳೆದಿದೆ. ಇದೇ ಕಾರ್ಯಕ್ರಮವನ್ನು ದೇಶದ 14 ಸ್ಟೋರ್‍ಗಳಲ್ಲೂ ಆಯೋಜಿಸಲಾಗಿದೆ. ದೇಶದ 7 ನಗರಗಳ ಹೈಪರ್‍ಮಾರ್ಕೆಟ್‍ಗಳಲ್ಲೂ ಇದೇ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ.
ಪಿಜ್ಜಾ ತಯಾರಿಸುವುದು ಒಂದು ಅದ್ಭುತ ಕಾರ್ಯಕ್ರಮ. ಮಹಾದೇವಪುರದ ಮೋರ್ ಮೆಗಾಸ್ಟೋರ್‍ನಲ್ಲಿನ 5 ಜನರ ಬೇಕರಿ ತಂಡವು 5 ಗಂಟೆಗಳ ಸಮಯವನ್ನು ಪಿಜ್ಜಾ ತಯಾರಿಕೆಗೆ ವ್ಯಯಿಸಿದೆ. 40 ಕಿಲೋ ಹಿಟ್ಟು, 70 ಕಿಲೋ ತರಕಾರಿಗಳು ಮತ್ತು ಇತರ ಸಾಮಗ್ರಿಗಳನ್ನು ಪಿಜ್ಜಾ ತಯಾರಿಕೆಗೆ ಬಳಸಲಾಗಿತ್ತು.
ಮೋರ್ ಮೆಗಾಸ್ಟೋರ್ ಗ್ರಾಹಕರಿಗೆ 2014ರ ಕೊನೆಯ ದಿನಗಳನ್ನ ಇನ್ನಷ್ಟು ಮೆಮೊರೆಬಲ್ ಆಗಿಸುವ ಉದ್ದೇಶದಿಂದ ಈ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.