ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಸ್ಥಿರಾಸ್ತಿ ಸೂಚಿತ ದರಗಳ ಪರಿಷ್ಕರಣೆಗೆ ತಡೆ

ಸೋಮವಾರದಿಂದ ಜಾರಿಗೆ ಬರಬೇಕಿದ್ದ ಆಸ್ತಿಗಳ ಸೂಚಿತ ಬೆಲೆಗಳಿಗೆ, ಕಂದಾಯ ಸಚಿವ ವಿ ಶ್ರೀನಿವಾಸ್ ಪ್ರಸಾದ್ ...

Updated On : 2 Nov 2014, 11:33 am

ಬೆಂಗಳೂರು: ಸೋಮವಾರದಿಂದ ಜಾರಿಗೆ ಬರಬೇಕಿದ್ದ ಆಸ್ತಿಗಳ ಸೂಚಿತ ಬೆಲೆಗಳಿಗೆ, ಕಂದಾಯ ಸಚಿವ ವಿ ಶ್ರೀನಿವಾಸ್ ಪ್ರಸಾದ್ ಅವರು ಮಧ್ಯ ಪ್ರವೇಶಿಸಿ ಅನಿರ್ಧಿಷ್ಟ ಅವಧಿಗೆ ಈ ಆದೇಶಕ್ಕೆ ತಡೆ ನೀಡಿದ್ದಾರೆ.

ರಿಯಲ್ ಎಸ್ಟೇಟ್ ಗಳ ದರವನ್ನು ನಿರ್ದೇಶಿಸುವ ಈ ಸರ್ಕಾರಿ ಸೂಚಿತ ಬೆಲೆಗಳು, ಜಮೀನು ಮತ್ತು ಸ್ಥಿರಾಸ್ಥಿಗಳಿಗೆ ಹಾಕುವ ಸ್ಟಾಂಪ್ ಸುಂಕ ಮತ್ತು ವಾರ್ಷಿಕ ಸ್ಥಿರಾಸ್ತಿ ಕಂದಾಯ ತೆರಿಗೆಗಳನ್ನು ಮೌಲ್ಯಮಾಪನ ಮಾಡಲು ಕೂಡ ಸಹಕಾರಿ.

ಸಚಿವ ಶ್ರೀನಿವಾಸ್ ಪ್ರಸಾದ್ ಅವರು ಸೋಮವಾರ ಸೂಚಿತ ದರಗಳ ಪರಿಷ್ಕರಣೆಗೆ ಮತ್ತೆ ಸಭೆ ಕರೆದಿದ್ದಾರೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಸೂಚಿತ ದರಗಳ ಬಹಳ ಹೆಚ್ಚಾಗಿವೆ ಎಂದು ದೂರ ಬಂದ ಹಿನ್ನಲೆಯಲಿ ಈ ನಿರ್ಣಯ ಕೈಗೊಂಡಿದ್ದು, ತಮ್ಮ ಆದೇಶ ಬರುವವರೆಗೆ ಈ ಪರಿಷ್ಕೃತ ದರಗಳನ್ನು ಜಾರಿಗೆ ತರದಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕೆಲವು ವಾರಗಳ ಹಿಂದೆ ಸೂಚಿತ ದರಗಳನ್ನು ೧೦% ರಿಂದ ೧೫% ವರೆಗೆ ಸರ್ಕಾರ ಏರಿಸಿತ್ತು. ಇದು ಜಮೀನು-ಸ್ಥಿರಾಸ್ತಿಗಳ ನೊಂದಣಿಯಿಂದ ಹೆಚ್ಚಿನ ಸ್ಟಾಂಪ್ ವರಮಾನವನ್ನು ಸರ್ಕಾರಕ್ಕೆ ಗಳಿಸಿಕೊಡುತ್ತಿತ್ತು. ಸದ್ಯಕ್ಕೆ ಸರ್ಕಾರಿ ನಿಗದಿ ಪಡಿಸಿರಿವ ಸೂಚಿತ ದರದ ಮೇಲೆ ೫.೬% ನ್ನು ನಗರಗಳಲ್ಲಿ ಸ್ಟಾಂಪ್ ಸುಂಖ ಎಂದು ನಿಗದಿ ಪಡಿಸಿದ್ದು, ೧% ನೊಂದಣಿ ಶುಲ್ಕವಾಗಿ ನಿಗದಿಪಡಿಸಿದೆ. ಗ್ರಾಮಾಂತರ ಪ್ರದೇಶಗಳಲ್ಲಿ  ಸ್ಟಾಂಪ್ ಸುಂಖ ೫.೬೫% ಇದ್ದು, ನೊಂದಣಿ ಶುಲ್ಕ ೧% ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement