ವಾರದಲ್ಲಿ ಒಂದು ಬಾರಿ ಹುಬ್ಬಳ್ಳಿ- ಮುಂಬೈ ಮಧ್ಯೆ ನೇರ ರೈಲು
ಹುಬ್ಬಳ್ಳಿ-ಬೆಳಗಾವಿ -ಹುಬ್ಬಳ್ಳಿ ಫಾಸ್ಟ್ ...
ಹುಬ್ಬಳ್ಳಿ: ಹುಬ್ಬಳ್ಳಿ-ಬೆಳಗಾವಿ -ಹುಬ್ಬಳ್ಳಿ ಫಾಸ್ಟ್ ಪ್ಯಾಸೆಂಜರ್ ರೈಲು ಹಾಗೂ ಹುಬ್ಬಳ್ಳಿ -ಲೋಕಮಾನ್ಯ ತಿಲಕ ಟರ್ಮಿನಸ್- ಹುಬ್ಬಳ್ಳಿ ವೀಕ್ಲಿ ಎಕ್ಸ್ಪ್ರೆಸ್ ರೈಲಿಗೆ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಸಂಸದರಾದ ಪ್ರಹ್ಲಾದ ಜೋಶಿ ಹಾಗೂ ಸುರೇಶ ಅಂಗಡಿ ಶನಿವಾರ ಚಾಲನೆ ನೀಡಿದರು. ನ.2ರಿಂದ ನಿತ್ಯ ಹುಬ್ಬಳ್ಳಿ-ಬೆಳಗಾವಿ ಫಾಸ್ಟ್ ಪ್ಯಾಸೆಂಜರ್ ರೈಲು (56921) ಹುಬ್ಬಳ್ಳಿ ನಿಲ್ದಾಣದಿಂದ ಸಂಜೆ 6ಕ್ಕೆ ಹೊರಟು ಅಂದೇ ರಾತ್ರಿ 9.30ಕ್ಕೆ ಬೆಳಗಾವಿ ತಲುಪುವುದು. ಬೆಳಗಾವಿ-ಹುಬ್ಬಳ್ಳಿ ಫಾಸ್ಟ್ ಪ್ಯಾಸೆಂಜರ್ ರೈಲು (56922) ಬೆಳಗಾವಿ ನಿಲ್ದಾಣದಿಂದ ಬೆಳಗ್ಗೆ 6ಕ್ಕೆ ಹೊರಟು ಬೆ.9.50ಕ್ಕೆ ಹುಬ್ಬಳ್ಳಿ ನಿಲ್ದಾಣ ತಲುಪುವುದು.
ಹುಬ್ಬಳ್ಳಿ- ಮುಂಬೈ ಮಧ್ಯೆ ವಾರದಲ್ಲಿ ಒಂದು ಬಾರಿ ಸಂಚರಿಸುವ ಹುಬ್ಬಳ್ಳಿ-ಲೋಕಮಾನ್ಯ ತಿಲಕ ಟರ್ಮಿನಲ್ ವೀಕ್ಲಿ ಎಕ್ಸ್ಪ್ರೆಸ್ ರೈಲು ಹುಬ್ಬಳ್ಳಿ ನಿಲ್ದಾಣದಿಂದ (17321) ಪ್ರತಿ ಶನಿವಾರ ರಾತ್ರಿ 10.30ಕ್ಕೆ ಹೊರಟು ಭಾನುವಾರ ಸಂಜೆ 4.55ಕ್ಕೆ ಲೋಕಮಾನ್ಯ ತಿಲಕ್ ಟರ್ಮಿನಸ್ ತಲುಪಲಿದೆ. ಮುಂಬೈನ ಲೋಕಮಾನ್ಯ ಕಿಲಕ್ ಟರ್ಮಿನಸ್ನಿಂದ (17321) ಭಾನುವಾರ ರಾತ್ರಿ 9.15ಕ್ಕೆ ಹೊರಡುವ ರೈಲು ಸೋಮವಾರ ಸಂಜೆ 5.35ಕ್ಕೆ ಹುಬ್ಬಳ್ಳಿ ನಿಲ್ದಾಣ ತಲುಪುವುದು.