ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ನೀರಿನ ದರ ಏರಿಕೆ ಹಿಂಪಡೆಯದಿದ್ದರೆ ತೀವ್ರ ಹೋರಾಟ

ಜಲಮಂಡಳಿ ನೀರಿನ ದರವನ್ನು ಏಕಾಏಕಿ ಹೆಚ್ಚಿಸಿರುವ ನಿರ್ಧಾರವನ್ನು ವಾಪಸ್ ಪಡೆಯದಿದ್ದರೆ ಉಗ್ರ ...

Rashmi Kasaragodu
Updated On : 4 Nov 2014, 1:24 am

ಬೆಂಗಳೂರು: ಜಲಮಂಡಳಿ ನೀರಿನ ದರವನ್ನು ಏಕಾಏಕಿ ಹೆಚ್ಚಿಸಿರುವ ನಿರ್ಧಾರವನ್ನು  ವಾಪಸ್ ಪಡೆಯದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಎನ್. ಆರ್ ರಮೇಶ್ ಎಚ್ಚರಿಸಿದ್ದಾರೆ.

ಜಲಮಂಡಳಿ ವೈಫಲ್ಯದಿಂದ ಆಗುತ್ತಿರುವ ಆದಾಯ ಸೋರಿಕೆ ತಡೆಯದೆ ಜನರ ಮೇಲೆ ಬೆಲೆ ಏರಿಕೆ ಭಾರ ಹೊರಿಸಿದೆ. ಇದನ್ನು ಹಿಂತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಬಿಜೆಪಿ ಜಲ ಮಂಡಳಿ ಕಚೇರಿ ಮುಂದೆ ಧರಣಿ ನಡೆಸುತ್ತದೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಗರದ ಕೇಂದ್ರ ಭಾಗದಲ್ಲಿ ಶೇ.79ರಷ್ಟು ಮಂದಿ ಕಾವೇರಿ ನೀರು ಬಳಸುತ್ತಾಕೆ. ಹೀಗಾಗಿ ಮನೆಗಳಿಗೆ ತಿಂಗಳಿಗೆ 32,000ಲೀಟರ್‌ವರೆಗೂ ನೀರು ಬೇಕಾಗುತ್ತದೆ. ಅಂದರೆ ನಗರಕ್ಕೆ ನಿತ್ಯ 900 ದಶಲಕ್ಷ ಲೀಟರ್ ಮಾತ್ರ ಬಳಕೆಯಾಗುತ್ತಿದ್ದು, ಇದಕ್ಕೆ ಮೀಟರ್ ಅಳವಡಿಸಿ ತಡೆಯಬೇಕಿದೆ. ಈ ಸಮಸ್ಯೆ ಸರಿಪಡಿಸದೆ ಜಲಮಂಡಳಿ ಏಕಾಏಕಿ ದರ ಹೆಚ್ಚಿಸಿ ಬಡವರ ಹೊಟ್ಟೆ ಮೇಲೆ ಹೊಡೆದಿದೆ ಎಂದರು.
ಬಿಬಿಎಂಪಿ ವಾಹನ ಬೇಡ:
ಬಿಬಿಎಂಪಿಯಿಂದ ಆಡಳಿತ ಪಕ್ಷ ನಾಯಕರಿಗೆ ಸಿಗುವ ವಾಹನ ಸೌಲಭಫ್ಯ ಪಡೆಯುತ್ತಿಲ್ಲ. ಬಿಬಿಎಂಪಿ ಆರ್ಥಿಕ ಸಂಕಷ್ಟದಲ್ಲಿರುವುದರಿಂದ ನನಗೆ ಸಿಗುವ ಅಧಿಕೃತ ವಾಹನವನ್ನು ಪ್ರಾಮಾಣಿಕ ಅಧಿಕಾರಿಗಳಿಗೆ ನೀಡುವಂತೆ ಆಯುಕ್ತರಲ್ಲಿ ವಿನಂತಿಸಿದ್ದೇನೆ. ಆದ್ದರಿಂದ ನನ್ನ ಹುದ್ದೆಗೆ ಸಂಬಂಧಿಸಿದ ಕಾರ್ಯ ಚಟುವಟಿಕೆಗಳಿಗೆ ನನ್ನ ಸ್ವಂತ ವಾಹನವನ್ನೇ ಬಳಸುತ್ತೇನೆ ಎಂದು ರಮೇಶ್ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement