ಪುಸ್ತಕ 
ಜಿಲ್ಲಾ ಸುದ್ದಿ

ಮುದ್ರಣ ಮಾಧ್ಯಮದ ಓದು ಹೆಚ್ಚು ಜನಪ್ರಿಯ

ಭಾರತದ ಯುವಜನತೆ ತಮ್ಮ ಓದಿಗೆ ಮುದ್ರಣ ಮಾಧ್ಯಮವನ್ನೇ ಹೆಚ್ಚು ಅವಲಂಬಿಸಿದ್ದಾರೆ ಎಂಬ ಸತ್ಯ ಬೆಳಕಿಗೆ ಬಂದಿದೆ...

ಬೆಂಗಳೂರು: ಭಾರತದ ಯುವಜನತೆ ತಮ್ಮ ಓದಿಗೆ ಮುದ್ರಣ ಮಾಧ್ಯಮವನ್ನೇ ಹೆಚ್ಚು ಅವಲಂಬಿಸಿದ್ದಾರೆ ಎಂಬ ಸತ್ಯ ಬೆಳಕಿಗೆ ಬಂದಿದೆ. ಟಾಟಾ ಲಿಟರೇಚರ್ ಲೈವ್‌ನ  5ನೇ ಆವೃತ್ತಿಯ ನಂತರ ಆನ್‌ಲೈನ್ ಮೂಲಕ ನಡೆಸಿದ ಸಮೀಕ್ಷೆಯಲ್ಲಿ ಈ ವಿಚಾರ ಬಹಿರಂಗವಾಗಿದೆ.

ಅತಿ ಹೆಚ್ಚು ಟೆಕ್ನೋಸೇವಿಗಳಾಗಿರುವ ಯುವಕರೇ ಆನ್‌ಲೈನ್ ನಲ್ಲಿ ಪಿಡಿಎಫ್ ರೂಪದಲ್ಲಿ ಪುಸ್ತಕ ಓದಲು ಬಯಸುತ್ತಿಲ್ಲ. ಇದು ಮುದ್ರಣ ಜಗತ್ತಿಗೆ ದೊರೆತಿರುವ ಶುಭ ಸಂದೇಶ ಎಂದು ಸಮೀಕ್ಷೆ ಹೇಳಿದೆ.

ದೇಶದ 5 ಮಹಾನಗರಗಳಲ್ಲಿ ಸುಮಾರು 1426 ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಸಮೀಕ್ಷೆಯಲ್ಲಿ  ಪಾಲ್ಗೊಂಡಿದ್ದ ಶೇ. 78 ರಷ್ಟು  ಮುಂದಿ ಇ-ಪುಸ್ತಕಕ್ಕಿಂತ ಮುದ್ರಿತ ರೂಪದಲ್ಲಿಯೇ ಪುಸ್ತಕ ಓದಲು ಖುಷಿ ಪಡುತ್ತೇವೆ ಎಂದು ಹೇಳಿದ್ದಾರೆ.

ಆದರೆ ಮಹಾನಗರಗಳಲ್ಲಿ ನಿಧಾನವಾಗಿ ಇ-ಪುಸ್ತಕದತ್ತ ಜನ ವಾಲುತ್ತಿರುವುದು ಸಾಬೀತಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರು ಇ- ಪುಸ್ತಕ ಓದುಗರ ಪಟ್ಟಿಯಲ್ಲಿ ಎರಡನೇ ಸ್ಥಾನ ಹೊಂದಿದ್ದು, ಚೆನ್ನೈ ಮೊದಲ ಸ್ಥಾನದಲ್ಲಿದೆ.

ಯುವಕರೇ ಪುಸ್ತಕ ಪ್ರಿಯರು
ಮುದ್ರಿತ ಪುಸ್ತಕ ಓದುವವರಲ್ಲಿ ಮೊದಲನೇ ಸ್ಥಾನವನ್ನು 20 ವರ್ಷದೊಳಗಿನವರೇ ಪಡೆದಿದ್ದಾರೆ. ಶೇ. 81 ರಷ್ಟು 20 ವರ್ಷದೊಳಗಿನ ಯುವಕರು ಮುದ್ರಿತ ರೂಪದಲ್ಲಿ ಪುಸ್ತಕ ಓದುವುದನ್ನು ಇಷ್ಟಪಟ್ಟರೆ, 21-30 ವಯೋವಾನದ ಶೇ.79 , 31-40 ವಯೋವಾನ ಮತ್ತು 41-50 ವಯೋವಾನದ ಶೇ.75ರಷ್ಟು ಮಂದಿ ಮುದ್ರಿತ ಪುಸ್ತಕದ ಪರವಾಗಿ ನಿಂತಿದ್ದಾರೆ. ಇನ್ನು ನಗರವಾರ ನೋಡಿದಾಗ ಮುಂಬೈನಲ್ಲಿ ಶೇ. 80ರಷ್ಟು ಮಂದಿ ಮುದ್ರಿತ ಜಗತ್ತನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನಂತರ ದಿಲ್ಲ (ಶೇ.79), ಕೊಲ್ಕತ್ತಾ (ಶೇ.78), ಬೆಂಗಳೂರು (ಶೇ.77) , ಚೆನ್ನೈ (ಶೇ.76) ರಷ್ಟು ಜನ ಇ-ಪುಸ್ತಕ ಓದಲು ಇಷ್ಟಪಟ್ಟಿಲ್ಲ.

ಈ ಸಮೀಕ್ಷೆ ಭಾರತ ಹೇಗೆ ಓದುತ್ತಿದೆ ಎಂಬುದನ್ನು ಬಹಿರಂಗಗೊಳಿಸಿದೆ. ಬರಹದ ಜಗತ್ತನ್ನು ಭಾರತ ಪ್ರೀತಿಸುತ್ತಿರುವುದನ್ನು ನೋಡಲು ಖುಷಿಯಾಗುತ್ತಿದೆ . ಮುಂದಿನ ಟಾಟಾ ಲಿಟರೇಚರ್ ಲೈವ್ ಲಿಟ್ ಫೆಸ್ಟ್ ಆವೃತ್ತಿಗೆ ಇದು ನಮ್ಮನ್ನು ಪ್ರೋತ್ಸಾಹಿಸಿದೆ.

-ಅನಿಲ್ ವಿಧಾರ್ಕರ್
ಟಾಟಾ ಲಿಟೆರೇಚರ್ ಲೈವ್, ದಿ ಮುಂಬೈ ಲಿಟ್‌ಫೆಸ್ಟ್ ಸಂಸ್ಥಾಪಕ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!