ಮುಖ್ಯ ಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ಬಾಲಕಿಯರ ಶಾಲೆಗಳಿಗೆ ಪುರುಷ ಸಿಬ್ಬಂದಿ ಬೇಡ: ಸಿದ್ದರಾಮಯ್ಯ

ಬಾಲಕಿಯರ ಶಾಲೆಗಳಲ್ಲಿ ಇನ್ನು ಮುಂದೆ ಪುರುಷ ಶಿಕ್ಷಕರಾಗಲೀ ಅಥವಾ ಸಿಬ್ಬಂದಿ ವರ್ಗಕ್ಕೆ ಪುರುಷರನ್ನು ಉದ್ಯೋಗಕ್ಕೆ ತೆಗೆದುಕೊಳ್ಳುವುದಿಲ್ಲ...

ಚಿತ್ರದುರ್ಗ: ಬಾಲಕಿಯರ ಶಾಲೆಗಳಲ್ಲಿ ಇನ್ನು ಮುಂದೆ ಪುರುಷ ಶಿಕ್ಷಕರಾಗಲೀ ಅಥವಾ ಸಿಬ್ಬಂದಿ ವರ್ಗಕ್ಕೆ ಪುರುಷರನ್ನು ಉದ್ಯೋಗಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ತಿಳಿಸಿದ್ದಾರೆ.

ರಾಜ್ಯ ಮಟ್ಟದ ಸ್ತ್ರೀ ಶಕ್ತಿ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು, ೧ ರಿಂದ ೫ ತರಗತಿಯವರೆಗೆ ಹೆಣ್ಣು ಮಕ್ಕಳು ಓದುವ ಶಾಲೆಗಳಲ್ಲಿ ಈ ಕಾನೂನನ್ನು ಜಾರಿ ಮಾಡಲಾಗುವುದು. ಇಂತಹ ಎಳೆಯ ವಯಸ್ಸಿನಲ್ಲಿ ಕಾಮುಕರಿಗೆ ಹೆಣ್ಣು ಮಕ್ಕಳು ಸುಲಭ ಬಲಿ. ಈ ನಡೆ ವಿದ್ಯಾರ್ಥಿನಿಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಮತ್ತು ರೇಪ್ ಪ್ರಕರಣಗಳನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ ಎಂದಿದ್ದಾರೆ.

ಬಹುತೇಕ ರೇಪಿಸ್ಟ್ ಗಳು ಹೆಣ್ಣುಮಕ್ಕಳಿಗೆ ಅಪರಿಚಿತರೇನಲ್ಲ, ಸಾಮಾನ್ಯವಾಗಿ ಅವರಿಗೆ ಗೊತ್ತಿರುವವರೇ ಆಗಿರುತ್ತಾರೆ ಎಂದ ಸಿದ್ದರಾಮಯ್ಯ, ರಾಜ್ಯದ ಎಲ್ಲ ಶಾಲೆಗಳಲ್ಲಿ ಸಿಸಿಟಿವಿ ಗಳನ್ನು ಅಳವಡಿಸಿ, ಅವುಗಳ ದೃಶ್ಯ ವೀಕ್ಷಣಾ ಕೊಠಡಿಗಳನ್ನು ಸ್ಥಾಪಿಸುವಂತೆ ವಿವರವಾದ ಮಾರ್ಗದರ್ಶನವನ್ನು ಕೊಟ್ಟಿದ್ದೇವೆ ಎಂದರು.

ತಮ್ಮ ಸಿಬ್ಬಂದಿವರ್ಗದ ಸಂಪೂರ್ಣ ವಿವರಗಳನ್ನು ಸಂಗ್ರಹಿಸುವಂತೆ ಎಲ್ಲ ಶಾಲೆಗಳಿಗೂ ಸೂಚನೆ ಕೊಟ್ಟಿದ್ದು, ಇನ್ನು ಮುಂದೆ ಸಿಬ್ಬಂದಿಗಳ ನೇಮಕಕ್ಕೆ ಮುಂಚೆ ಅವರ ಪೂರ್ವಾಪರಗಳನ್ನು ಪರಿಶೀಲಿಸಬೇಕೆಂದು ತಿಳಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

ಶಾಲೆಯಲ್ಲಿ ನಡೆಯುವೆ ಯಾವುದೇ ಕ್ರಿಮಿನಲ್ ಅಪರಾಧಕ್ಕೆ ಶಾಲಾ ಆಡಳಿತ ವರ್ಗ ಮತ್ತು ಶಾಲೆಯ ಮುಖ್ಯೋಪಾಧ್ಯಾಯರನ್ನೆ ಹೊಣೆ ಮಾಡಲಾಗುವುದು ಎಂದು ಕೂಡ ತಿಳಿಸಿದ್ದಾರೆ.

ಮಹಿಳಾ ನಿಗಮದ ಸಾಲ ಮನ್ನಾ


ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ (ಕೆ ಎಸ್ ಡಬ್ಲ್ಯೂ ಡಿ ಸಿ) ದಿಂದ ಪಡೆದಿರುವ ಎಲ್ಲ ಸಾಲವನ್ನೂ ಸರ್ಕಾರ ಮನ್ನಾ ಮಾಡಲಿದೆ ಎಂದು ತಿಳಿಸಿದ ಮುಖ್ಯಮಂತ್ರಿ ಈ ನಿಟ್ಟಿನಲ್ಲಿ ಸಂಪುಟ ಸಭೆ ನಡೆದ ನಂತರ ಸರ್ಕಾರಿ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು.

ಈ ಬೃಹತ್ ಸಮಾವೇಶದಲ್ಲಿ ಚಿತ್ರದುರ್ಗ, ದಾವಣಗೆರೆ, ತುಮಕೂರು, ಶಿವಮೊಗ್ಗ, ಬಳ್ಳಾರಿಯಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ರಾಜ್ಯದ ದಮನಿತ ವರ್ಗದ ಮತ್ತು ಮಹಿಳೆಯರ ಸಬಲೀಕರಣಕ್ಕೆ ಸರ್ಕಾರ ಬದ್ಧವಿದ್ದು, ಇದೇ ಕಾರಣಕ್ಕೆ ವಿವಿಧ ಸಂಘಗಳಿಂದ ನೀಡಿದ ೨೪೪೮ ಕೋಟಿ ಸಾಲವನ್ನು ಸರ್ಕಾರ ಮನ್ನಾ ಮಾಡುತ್ತಿರುವುದು ಎಂದರು.

ಮುಂದಿನ ವಿತ್ತೀಯ ವರ್ಷದಿಂದ ಸ್ತ್ರೀ ಶಕ್ತಿ ಸಂಘಕ್ಕೆ ಕೊಡುವ ಸಾಲವನ್ನು ೧ ಲಕ್ಷದಿಂದ ೩ ಲಕ್ಷಕ್ಕೆ ಏರಿಸುವುದಾಗಿ ಘೋಷಿಸಿದ ಮುಖ್ಯಮಂತ್ರಿ, ಈ ಸಾಲವನ್ನು ಬ್ಯಾಂಕುಗಳ ಜೊತೆಗೆ ಬೆಸೆಯಲಾಗುವುದು ಎಂದ ಅವರು ಬಡ್ಡಿ ದರ ವರ್ಷಕ್ಕೆ ೬% ಇರುತ್ತದೆ ಎಂದಿದ್ದಾರೆ.

ರಾಜ್ಯದ ಎಲ್ಲ ೧೭೬ ತಾಲ್ಲೂಕು ಕೇಂದ್ರಗಳಲ್ಲಿ ಸ್ತ್ರೀ ಶಕ್ತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದ ಸಿಎಂ, ಈ ಕೇಂದ್ರಗಳ ಉತ್ಪನ್ನಗಳಿಗೆ ಪರಿಣಾಮಕಾರಿಯಾಗಿ ಮಾರುಕಟ್ಟೆ ಒದಗಿಸಿ ಸ್ತ್ರೀ ಶಕ್ತಿ ಕೇಂದ್ರಗಳ ಆರ್ಥಿಕ ಸ್ಥಿತಿ ಸುಧಾರಿಸುವತ್ತ ಗಮನ ಹರಿಸಲಾಗುವುದು ಎಂದ ಸಿಎಂ ಇದರಿಂದ ಸ್ತ್ರೀಶಕ್ತಿ ಕೇಂದ್ರಗಳಲ್ಲಿ ದುಡಿಯುವವರ ಮಕ್ಕಳ ಶಿಕ್ಷಣಕ್ಕೆ ಸಹಕಾರಿಯಾಗುವುದು ಎಂದಿದ್ದಾರೆ.

ರಾಜ್ಯದಲ್ಲಿ ಪುರುಷ ಮತ್ತು ಸ್ತ್ರೀ ಸಂಖ್ಯೆಯ ಅಂತರದ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಿದ್ದರಾಮಯ್ಯ "ಕರ್ನಾಟಕದಲ್ಲಿ ೧೦೦೦ ಪುರುಷರಿಗೆ, ೯೬೮ ಹೆಂಗಸರಿದ್ದಾರೆ. ಹೆಣ್ಣು ಭ್ರೂಣಹತ್ಯೆ ತಡೆಯಲು ಗಂಭೀರ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹೆಣ್ಣು ಮಕ್ಕಳು ಶಿಕ್ಷಣ ಪಡೆಯುವುದನ್ನು ಖಾತ್ರಿ ಪಡಿಸಲು, ಶಾಲೆಗಳಿಗೆ ಹೋಗುವ ಹೆಣ್ಣು ಮಕ್ಕಳಿಗೆ ಸರ್ಕಾರ ೨ ಲಕ್ಷ ಸಾಲ ಕೊಡುತ್ತಿದೆ. ಈ ಮೊತ್ತವನ್ನು ವಿದ್ಯಾರ್ಥಿನಿಯರ ಬ್ಯಾಂಕ್  ಅಕ್ಕೌಂಟ್ ನಲ್ಲಿ ನೇರವಾಗಿ ಜಮಾಯಿಸಲಾಗುತ್ತದೆ." ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT