ಬೆಂಗಳೂರು: ಟ್ರಿನಿಟಿ ಕೇರ್ ಫೌಂಡೇಶನ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಮುಖದಲ್ಲಿ ನ್ಯೂನತೆಯಿರುವ ಮಕ್ಕಳಿಗೆ ಉಚಿತ ಶಸ್ತ್ರ ಚಿಕಿತ್ಸೆ ಮಾಡಲು ಮುಂದಾಗಿದೆ.
ಸೀಳುತುಟಿ ಮತ್ತು ಸೀಳು ಅಂಗಳದ ಶಸ್ತ್ರ ಚಿಕಿತ್ಸೆ, ಹಿಂದಿನ ಸೀಳು ತುಟಿ ಶಸ್ತ್ರ ಚಿಕಿತ್ಸೆಯ ಪರಿಣಾಮವಾಗಿ ಉಳಿದ ತುಟಿಯ ಕಲೆಯನ್ನು ಸರಿಪಡಿಸುವ ಶಸ್ತ್ರ ಚಿಕಿತ್ಸೆ, ಹಿಂದಿನ ಸೀಳು ಅಂಗಳದ ಶಸ್ತ್ರ ಚಿಕಿತ್ಸೆಯ ಪರಿಣಾಮವಾಗಿ ಉಳಿದ ಅಂಗಳದಲ್ಲಿನ ರಂಧ್ರವನ್ನು ಮುಚ್ಚುವ ಶಸ್ತ್ರ ಚಿಕಿತ್ಸೆ, ಮೂಗಿನ ವಿಕಲಾಂಗತೆಯನ್ನು ಸರಿಪಡಿಸುವ ಶಸ್ತ್ರ ಚಿಕಿತ್ಸೆ, ಹುಟ್ಟಿನಿಂದಲೇ ಕಂಡುಬರುವ ಮುಖದ ವಿಕಲಾಂಗತೆ ಸೇರಿದಂತೆ ಹುಟ್ಟಿನಿಂದಲೇ ಅಥವಾ ಚಿಕ್ಕ ವಯಸ್ಸಿನಿಂದಲೇ ಬಾಯಿ ತೆರೆಯಲು ತೊಂದರೆ ಇದ್ದಲ್ಲಿ ಅದರ ಪರಿಣಾಮವಾಗಿ ಚಿಕ್ಕ ಕೆಳದವಡೆ ಇರುವ ಮಕ್ಕಳಿಗೆ ಟ್ರಿನಿಟಿ ಕೇರ್ ಫೌಂಡೇಶನ್ ವತಿಯಿಂದ ಉಚಿತ ಶಸ್ತ್ರ ಚಿಕಿತ್ಸೆ ಮಾಡಲಾಗುವುದು.
ಉಚಿತ ಶಸ್ತ್ರ ಚಿಕಿತ್ಸೆಯ ಅಗತ್ಯವಿರುವವರು ಕುಣಿಗಲ್ ಸಕರ್ಾರಿ ತಾಲ್ಲೂಕು ಆಸ್ಪತ್ರೆಯಲ್ಲಿ ನವೆಂಬರ್ 15 ರಂದು ಉಚಿತ ಮುಖ ಮತ್ತು ದವಡೆ ವಿಕೃತ ತಪಾಸಣಾ ಶಿಬಿರದಲ್ಲಿ ಭಾಗವಹಿಸಬೇಕು. ಶಿಬಿರದಲ್ಲಿ ಪಾಲ್ಗೊಂಡ ಅಭ್ಯಥರ್ಿಗಳಿಗೆ ಉಚಿತವಾಗಿ ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ಸಂಪಕರ್ಿಸಿ - ಡಾ. ಥಾಮಸ್ - 9880394959