ಬೆಂಗಳೂರು: ಕರ್ನಾಟಕ ರಾಜ್ಯ ಉಪ್ಪಾರ ಕ್ಷೇಮಾಭಿವೃದ್ಧಿ ವಿವಿದೋದ್ದೇಶ ಮತ್ತು ಗೃಹ ನಿರ್ಮಾಣ ಸಹಕಾರ ಸಂಘ ಭಾನುವಾರ ರಾಜೀವಗಾಂಧಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ರವೀಂದ್ರನಾಥ ಅವರನ್ನು ಸನ್ಮಾನಿಸಿತು.
ನಗರದ ಜಯನಗರ 3ನೇ ಬ್ಲಾಕ್ ನ ಎನ್.ಎಂ.ಕೆ.ಆರ್.ವಿ. ಪಿ.ಯು. ಕಾಲೇಜು ಕ್ಯಾಂಪಸ್ ನ ಮಂಗಳ ಮಂಟಪ ಅಡಿಟೋರಿಯಂನಲ್ಲಿ ಮಾಜಿ ಶಾಸಕ, ಕರ್ನಾಟಕ ರಾಜ್ಯ ಉಪ್ಪಾರ ಕ್ಷೇಮಾಭಿವೃದ್ಧಿ ವಿವಿದೋದ್ದೇಶ ಮತ್ತು ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಎಚ್.ಸಿ ನೀರಾವರಿ ಅವರು ಡಾ. ರವೀಂದ್ರನಾಥ ಅವರನ್ನು ಸಂಘದ ವತಿಯಿಂದ ನೆನಪಿನ ಕಾಣಿಕೆಯೊಂದಿಗೆ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ರವೀಂದ್ರನಾಥ್ ಅವರು, ಸಮಾಜದ ಎಲ್ಲಾ ಪ್ರಥಿಭಾವಂತರಿಗೆ ಗೌರವ ಸಿಗಬೇಕು. ವೈದ್ಯರಾಗಿ ನನ್ನ ಕೆಲಸ ಖುಷಿ ತಂದಿದೆ. ಆರೋಗ್ಯಕ್ಕಾಗಿ ಪ್ರತಿಯೊಬ್ಬರು ವ್ಯಾಯಾಮ ಮಾಡಬೇಕು ಎಂದರು.
ಇದೇ ವೇಳೆ, ಉಪ್ಪಾರ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು. ಕಾರ್ಯಕ್ರಮವನ್ನು ಹನುಮಾಕ್ಷಿ ಗೋಗಿ ಅವರು ನಿರೂಪಿಸಿದರು.