ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಜೈಲಲ್ಲಿ ಲೈಂಗಿಕ ದೌರ್ಜನ್ಯ ಆರೋಪ ಸುಳ್ಳು : ಸಚಿವೆ

ಕಾರಾಗೃಹದಲ್ಲಿ ತಮ್ಮ ಮೇಲೆ ಯಾವುದೇ...

ಉಮಾಶ್ರೀ
Rashmi Kasaragodu
Updated On : 16 Nov 2014, 10:22 am

ಬೆಂಗಳೂರು: ಕಾರಾಗೃಹದಲ್ಲಿ ತಮ್ಮ ಮೇಲೆ ಯಾವುದೇ ರೀತಿಯ ಲೈಂಗಿಕ ದೌರ್ಜನ್ಯ ನಡೆದಿಲ್ಲ. ಅನಗತ್ಯವಾಗಿ ನಮ್ಮ ಮೇಲೆ ತೇಜೋವಧೆ ಮಾಡಲಾಗುತ್ತಿದೆ. ಶಿಕ್ಷೆ ಪೂರೈಸಿ ಜೈಲಿನಿಂದ ಬಿಡುಗಡೆಯಾಗಿ ಹೊರಬಂದಾಗ ನಮ್ಮನ್ನು ಸಮಾಜ ಕೆಟ್ಟದಾಗಿ ಕಾಣುತ್ತದೆ. ಜೈಲಿನಲ್ಲಿ ಆ ರೀತಿ ನಡೆಯುತ್ತಿದೆ ಎಂದು ನಾವ್ಯಾರೂ ಪತ್ರ ಬರೆದಿಲ್ಲ. ಯಾರು  ಬರೆದಿದ್ದಾರೋ ನಮಗೆ ಗೊತ್ತಿಲ್ಲ...'

ಮಹಿಳಾ ಕೈದಿಗಳ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ  ಸಚಿವೆ ಉಮಾಶ್ರೀ ಶನಿವಾರ ಕಾರಾಗೃಹಕ್ಕೆ ಭೇಟಿ ನೀಡಿದಾಗ, ಮಹಿಳಾ ಕೈದಿಗಳು ಹೇಳಿಕೊಂಡ ನೋವಿನ ಮಾತುಗಳಿವು. ಬಳಿಕ ಮಾಧ್ಯಮದೊಂದಿಗೆ ಉಮಾಶ್ರೀ ಮಾತನಾಡಿ, ಆರೋಪಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ  ಇಲಾಖೆ ಹಾಗು ಗೃಹ ಇಲಾಖೆ ಉನ್ನತ ಅಧಿಕಾರಿಗಳ ಜಂಟಿ ಸಮಿತಿ ತನಿಖೆ ನಡೆಸಲಿದೆ. ಅಧಿಕಾರಿಗಳು ಜೈಲಿಗೆ ಬಂದಾಗ ಹಿಂಜರಿಕೆಯಿಲ್ಲದೆ ಸಮಸ್ಯೆ ಹೇಳಿಕೊಳ್ಳುವಂತೆ ಸೂಚಿಸಲಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments