ಶ್ರವಣಬೆಳಗೊಳದ ಐತಿಹಾಸಿಕ ಗೊಮ್ಮಟೇಶ್ವರ ವಿಗ್ರಹ 
ಜಿಲ್ಲಾ ಸುದ್ದಿ

ಜೈನ ಪುಣ್ಯಕ್ಷೇತ್ರದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ

೮೧ನೆ ಕನ್ನಡ ಸಾಹಿತ್ಯ ಸಮ್ಮೇಳನ, ಚನ್ನರಾಯಪಟ್ಟಣದ, ಗೊಮ್ಮಟೇಶನ ನಾಡಾದ ಶ್ರವಣಬೆಳಗೊಳದಲ್ಲಿ...

ಹಾಸನ: ೮೧ನೆ ಕನ್ನಡ ಸಾಹಿತ್ಯ ಸಮ್ಮೇಳನ, ಚನ್ನರಾಯಪಟ್ಟಣದ, ಗೊಮ್ಮಟೇಶನ ನಾಡಾದ ಶ್ರವಣಬೆಳಗೊಳದಲ್ಲಿ ನಡೆಯಲಿದೆ. ಭಾನುವಾರ ಬೇಲೂರಿಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಈ ಹಿಂದೆ ಜನವರಿಯಲ್ಲಿ ನಡೆದ ಮಡಿಕೇರಿ ೮೦ನೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, ೮೧ನೆ ಸಾಹಿತ್ಯ ಸಮ್ಮೇಳನಕ್ಕೆ ಹಾವೇರಿ ಜಿಲ್ಲೆಯ ಹೆಸರನ್ನು ಸೂಚಿಸಲಾಗಿತ್ತು. ಸಮ್ಮೇಳನ ಹಾವೇರಿ ಜಿಲ್ಲಾ ಕೇಂದ್ರದಲ್ಲಿ ನಡೆಯಬೇಕೆ ಅಥವಾ ಹಾವೇರಿಯ ರಾಣಿಬೆನ್ನೂರಿನಲ್ಲಿ ನಡೆಯಬೇಕೆ ಎಂಬ ವಿಷಯದಲ್ಲಿ ಹಾವೇರಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಸದಸ್ಯರಲ್ಲಿ ಭಿನಾಭಿಪ್ರಾಯ ಮೂಡಿ, ಒಮ್ಮತಕ್ಕೆ ಬರದೆ ಇದ್ದುದಕ್ಕೆ, ಹಾವೇರಿ ಜಿಲ್ಲೆಯಿಂದಲೇ ಸಾಹಿತ್ಯ ಸಮ್ಮೇಳನ ಎತ್ತಂಗಡಿ ಆಗಿತ್ತು.

ಬೇಲೂರಿನಲ್ಲಿ ಸಭೆ ನಡೆಯುತ್ತಿರುವಾಗ, ಹಾವೇರಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು-ಸದಸ್ಯರು, ಹಾವೇರಿಯಲ್ಲೆ ಸಮ್ಮೇಳನ ನಡೆಸುವಂತೆ ಪ್ರತಿಭಟನೆ ನಡೆಸಿದರು ಎಂದು ತಿಳಿದು ಬಂದಿದೆ.

೮೧ನೆ ಸಾಹಿತ್ಯ ಸಮ್ಮೇಳನಕ್ಕೆ ಹಾಸನ ಮತ್ತು ಗುಲ್ಬರ್ಗಾ ಮಧ್ಯೆ ಸ್ಪರ್ಧೆ ಏರ್ಪಟ್ಟಿತ್ತು. ಮತ ಚಲಾಯಿಸುವ ಮೂಲಕ, ೨೩ ಮತಗಳೊಂದಿಗೆ ಹಾಸನ ಆಯ್ಕೆಗೊಂಡಿತು ಎಂದು ತಿಳಿದು ಬಂದಿದೆ.

ನಾಡು ನುಡಿ ಸಂಸ್ಕೃತಿ ಬಗ್ಗೆ ಚಿಂತನೆ ನಡೆಸುವ ಅತಿ ದೊಡ್ಡ ಸಮಾವೇಶ ಕನ್ನಡ ಸಾಹಿತ್ಯ ಸಮ್ಮೇಳನ. ಚರ್ಚಾಗೋಷ್ಠಿ, ಕವಿತಾ ವಾಚನ, ಸಾಹಿತ್ಯ ಮಂಥನ, ಪುಸ್ತಕ ಪ್ರದರ್ಶನ ಹಾಗೂ ಪ್ರಾದೇಶಿಕ ಭೋಜನದ ಉಚಿತ ವ್ಯವಸ್ಥೆ ಮುಂತಾದವುಗಳನ್ನು ಒಳಗೊಂಡ ಸಮ್ಮೇಳನ ಪ್ರತಿ ವರ್ಷ ಲಕ್ಷಾಂತರ ಜನರನ್ನು ಆಕರ್ಷಿಸುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ

4 ಜನರಿಗೆ ಒಂದೇ ಟಿಕೆಟ್! ಸಾರಿಗೆ ಇಲಾಖೆಯಲ್ಲಿ ಡೀಸೆಲ್ ಬೆನ್ನಲ್ಲೇ ಟಿಕೆಟ್ ರೋಲ್ ಕೊರತೆ

ದೆಹಲಿಯಲ್ಲಿ ಹೈಡ್ರಾಮಾ: ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿದ್ದ CJP ನಾಯಕರಾದ ದೀಪ್ಕೆ, ರಾಂಕಾ, ದಾಸ್ ಕೊನೆಗೂ ಬಿಡುಗಡೆ, 1 ವರ್ಷ ಶಾಂತಿ ಕಾಪಾಡುವಂತೆ ಷರತ್ತು..!

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ