ಪ್ರಶಸ್ತಿ ವಿಜೇತರು 
ಜಿಲ್ಲಾ ಸುದ್ದಿ

ಭಾರತಿ ವಿಷ್ಣುವರ್ಧನ್ ಸೇರಿ 8 ಮಂದಿಗೆ 'ಬಿಗ್ ಕನ್ನಡಿಗ ಅವಾರ್ಡ್‌'

ಬೆಂಗಳೂರು: ಭಾರತದ ಪ್ರಮುಖ ಹಾಗೂ ನಂ. 1 ಎಫ್ಎಂ ಸ್ಟೇಷನ್ 92.7 ಬಿಗ್ಎಫ್ಎಂ, ಕನ್ನಡ ನಾಡಿನ ನಿಜವಾದ ನಾಯಕರನ್ನು ಸನ್ಮಾನಿಸುವ ಮತ್ತು ಪ್ರಶಸ್ತಿಗಳನ್ನು ನೀಡಿಗೌರವಿಸುವ 'ಬಿಗ್ ಕನ್ನಡಿಗ ಅವಾರ್ಡ್ಸ್- 2014' ಅನ್ನು ಘೋಷಿಸಿದೆ.

ಈ ವರ್ಷ ಬಿಗ್ಎಫ್ಎಂ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟಗಳಲ್ಲಿ ಎಲ್ಲಾ ಕನ್ನಡಿಗರೂ ಹೆಮ್ಮೆ ಪಡುವಂತಹ ಸಾಧನೆ ಮಾಡಿರುವ ವಿವಿಧ ಕ್ಷೇತ್ರಗಳ ವ್ಯಕ್ತಿಗಳನ್ನು ಗೌರವಿಸಿ, ಸನ್ಮಾನಿಸುತ್ತಿದೆ. ಈ ನಿಟ್ಟಿನಲ್ಲಿ ಬಿಗ್ಎಫ್ಎಂ, ಕಲೆ, ಮನೋರಂಜನೆ, ಸಂಗೀತ, ರಾಜಕೀಯ ಮತ್ತು ಸಮಾಜಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವಂತಹಕನ್ನಡದ 'ನಾಯಕ'ರನ್ನು ಆಯ್ಕೆ ಮಾಡಿದೆ.

ಕನ್ನಡದ ಸಂಗೀತ, ಸಂಸ್ಕೃತಿ ಮತ್ತು ಸಮಾಜಕ್ಕೆ ಕೊಡುಗೆಗಳನ್ನು ನೀಡಿರುವಂತಹ ವ್ಯಕ್ತಿಗಳನ್ನು ಗೌರವಿಸುವ ಉದ್ದೇಶದಿಂದ ಈ ಪ್ರಶಸ್ತಿ ನೀಡಲಾಗಿದೆ.

ಟಾಟಾ ಟೀ ಅಗ್ನಿ & ಸುದರ್ಶನ ಸಿಲ್ಕ್ಸ್ ಬೆಂಬಲಿತ, 92.7 ಬಿಗ್ಎಫ್ಎಂ ಸಾದರಪಡಿಸುತ್ತಿರುವ ಬಿಗ್ಕನ್ನಡ ಪ್ರಶಸ್ತಿ ಸಮಾರಂಭದ 2ನೇ ಆವೃತ್ತಿಯಲ್ಲಿ, ತಮ್ಮತಮ್ಮ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿರುವಂತಹ ಈ ಕೆಳಕಂಡ ಗಣ್ಯರನ್ನು ಸನ್ಮಾನಿಸಿತು.

    ಭಾರತಿ ವಿಷ್ಣುವರ್ಧನ್ - ಸಿನಿಮಾ
    ಡಾ. ಶಿವಕುಮಾರ ಸ್ವಾಮೀಜಿ (ಸಿದ್ದಗಂಗಾ ಮಠ) - ಸಮಾಜ ಸೇವೆ
    ನಿರುಪಮಾ&ರಾಜೇಂದ್ರ - ನೃತ್ಯ
    ಆಶಾ ಶೇಷಾದ್ರಿ- ಕೃಷಿ (ಹೂವುಗಳ ಉತ್ಪಾದನೆ)
    ರಘು ದೀಕ್ಷಿತ್ - ಸಂಗೀತ
    ಸುನಿಲ್ ಹನುಮಂತಪ್ಪ- ಕ್ರೀಡೆಗಳು
    ಶರತ್ಗಾಯಕ್ವಾಡ್- ಕ್ರೀಡೆಗಳು
    ಬಿ ಎನ್ ಸುರೇಶ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT