ಕರಾವಳಿಗೆ ಬಂತು 2ನೇ ಹಾವರ್ ಕ್ರಾಫ್ಟ್
ರಾಜ್ಯದ ಕರಾವಳಿ ರಕ್ಷಣೆಗೆ ಎರಡನೇ ಹಾವರ್ ಕ್ರಾಫ್ಟ್ ಆಗಮಿಸಿದ್ದು,..
ಕಾರವಾರ: ರಾಜ್ಯದ ಕರಾವಳಿ ರಕ್ಷಣೆಗೆ ಎರಡನೇ ಹಾವರ್ ಕ್ರಾಫ್ಟ್ ಆಗಮಿಸಿದ್ದು, ಕರಾವಳಿ ರಕ್ಷಣಾ ಪಡೆಯ 10 ಸಿಬ್ಬಂದಿಯೊಡನೆ ಇದು ಮಂಗಳೂರು ಮತ್ತು ಕಾರವಾರದ ನಡುವೆ ಗಸ್ತು ತಿರುಗಲಿದೆ.
ಶತ್ರು ಪಡೆಯನ್ನು ಶೀಘ್ರವಾಗಿ ಪತ್ತೆ ಹಚ್ಚಲು ವಿಶೇಷ ತಂತ್ರಜ್ಞಾನ ಹೊಂದಿರುವ 'ಎಚ್-198' ಹೆಸರಿನ ಈ ಹಾವರ್ ಕ್ರಾಫ್ಟ್ 6.56 ಎಂ.ಎಂ. ರಿವಾಲ್ವರ್ ಹೊಂದಿದೆ. ಮುಂಬೈನಿಂದ ಆಗಮಿಸಿರುವ ಇದು ಸೋಮವಾರ ಬೆಳಗ್ಗೆ ಮಂಗಳೂರಿಗೆ ತೆರಳಿದೆ.
ಕಳೆದ ಡಿಸೆಂಬರ್ನಲ್ಲಿ ರತ್ನಗಿರಿಯಿಂದ ಮೊದಲ ಹಾವರ್ ಕ್ರಾಫ್ಟ್ ಕಾರವಾರದ ಟ್ಯಾಗೋರ್ ಕಡಲತೀರಕ್ಕೆ ಆಗಮಿಸಿತ್ತು. ನೀರು ಹಾಗೂ ನೆಲದ ಮೇಲೆ ಸಂಚರಿಸುವುದು ಇದರ ವಿಶೇಷ.