ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಮಳೆ ನೀರಿನಲ್ಲಿ ಕೊಚ್ಚಿ ಹೋದಳು ಬಾಲಕಿ

ನಗರದಲ್ಲಿ ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ಬನ್ನೇರುಘಟ್ಟರಸ್ತೆ ಬಿಳೇಕಹಳ್ಳಿಯಲ್ಲಿ ...

Rashmi Kasaragodu
Updated On : 7 Oct 2014, 6:39 am

ಬೆಂಗಳೂರು: ನಗರದಲ್ಲಿ ಸೋಮವಾರ ರಾತ್ರಿ  ಸುರಿದ ಭಾರಿ ಮಳೆಗೆ ಬನ್ನೇರುಘಟ್ಟರಸ್ತೆ ಬಿಳೇಕಹಳ್ಳಿಯಲ್ಲಿ ಕಾಲು ಜಾರಿ ದೊಡ್ಡಮೋರಿಗೆ ಬಿದ್ದ 8 ವರ್ಷದ ಬಾಲಕಿ ಗೀತಾಲಕ್ಷ್ಮಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ.

ಸೋಮವಾರ ಸಂಜೆ 7.30 ಸುಮಾರಿಗೆ ಬಾಲಕಿ ಅತ್ತೆಯೊಂದಿಗೆ ಹೊರಗೆ ಹೋಗಿದ್ದಳು. ಸ್ನೇಹಿತರನ್ನು ಭೇಟಿ ಮಾಡಿ ವಾಪಸ್ ಬರುವಾಗ ಜೋರಾಗಿ ಮಳೆ ಆರಂಭವಾಗಿದೆ. ಈ ವೇಳೆ ಇಬ್ಬರೂ ಕೈ ಹಿಡಿದುಕೊಂಡು ಮನೆ ಕಡೆ ಹೋಗಲು ಆರಂಭಿಸಿದ್ದಾರೆ. ಬಿಳೇಕಹಳ್ಳಿ ಕಲ್ಯಾಣಿ ಮೋಟರ್ಸ್ ಸಮೀಪ ಫುಟ್‌ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಆಕಸ್ಮಿಕವಾಹಿ ಬಾಲರಿ ನೀರಿಗೆ ಬಿದ್ದು  ಕೊಚ್ಚಿ ಹೋಗಿದ್ದಾಳೆ. ಜತೆಗಿದ್ದ ಅತ್ತೆ ಬಾಲಕಿಯನ್ನು  ಕೈ ಹಿಡಿದು ಎಳೆದುಕೊಳ್ಳಲು ಯತ್ನಿಸಿದರೂ ಸಾಧ್ಯವಾಗಿಲ್ಲ, ಬಾಲಕಿ ಜಾರಿ ಬಿದ್ದ ವೇಳೆ ಮಳೆ ಜೋರಾಗಿದ್ದ ಕಾರಣ ರಕ್ಷಿಸಲು ಸಾಧ್ಯವಾಗಿಲ್ಲ  ಎಂದು  ಬಾಲಕಿಯ ಅತ್ತೆ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ತಮಿಳುನಾಡು ಮೂಲದ ಬಾಲಕಿ ಹಬ್ಬದ ರದೆ ಹಿನ್ನೆಲೆಯಲ್ಲಿ ಬೆಂಗಳೂರಿನ ಅತ್ತೆ ಮನೆಗೆ ಬಂದಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು, ಪೊಲೀಸರು, ಅಗ್ನಿಶಾಮಕ ರಕ್ಷಣಾ ಸಿಬ್ಬಂದಿ, ಬಿಬಿಎಂಪಿ ಟಾಸ್ ಫೋರ್ಸ್ ಸಿಬ್ಬಂದಿ ಜೆಸಿಬಿಯೊಂದಿಗೆ ಆಗಮಿಸಿ ರಕ್ಷಣಾ  ಕಾರ್ಯಚರಣೆ ನಡೆಸಿದರು. ಜೆಸಿಪಿ ಯಂತ್ರಗಳ ಸಹಾಯದಿಂದ ಮೋರಿ ಮೇಲೆ ಹಾಸಲಾಗಿದ್ದ ಸಿಮೆಂಟ್ ಹಾಗೂ ಕಲ್ಲು ಬಂಡೆಗಳನ್ನು ತೆಗೆದು ಹುಡುಕಾಟ ನಡೆಸಲಾಯಿತು. ಸ್ಥಳೀಯಕು ಹಾಗೂ ಅಗ್ನಿಶಾಮಕ ರಕ್ಷಣಾ ಸಿಬ್ಬಂದಿ ಮೋರಿಗೆ ಇಳಿದು ಕೆಲ ಮೀಟರ್‌ಗಳವೆರಗೂ ಹುಡುಕಾಟ ನಡೆಸಿದರೂ ಬಾಲಕಿ ಸಿಗಲಿಲ್ಲ .


ಇದು ಕೊಚ್ಚಿಕೊಂಡು ಹೋಗುವಂಥ ಮಳೆಯಲ್ಲ. ಸುದ್ದಿ ತಿಳಿದ ತಕ್ಷಣ ನಮ್ಮ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಹುಡುಕಾಟ ನಡೆಸಿದ್ದಾರೆ. ಇಂತಹುದೇ ಜಾಗದಲ್ಲಿ ಬಾಲಕಿ ಮುಳುಗಿದ್ದಾಳೆ ಎನ್ನುವ ಸ್ಪಷ್ಟ ಮಾಹಿತಿ ಇಲ್ಲ
-ಲಕ್ಷ್ಮೀ ನಾರಾಯಣ,
ಬಿಬಿಎಂಪಿ ಕಮಿಷನರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement