ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ತೆರೆದ ಕೊಳವೆ ಬಾವಿ: ಹೈ ತರಾಟೆ

ರಾಜ್ಯದಲ್ಲಿ ಎಷ್ಟು ತೆರೆದ ಕೊಳವೆ ಬಾವಿಗಳಿವೆ? ಎಷ್ಟು ಕೊಳವೆ ಬಾವಿಗಳನ್ನು...

Mainashree
Updated On : 8 Oct 2014, 9:44 am

ಬೆಂಗಳೂರು: ರಾಜ್ಯದಲ್ಲಿ ಎಷ್ಟು ತೆರೆದ ಕೊಳವೆ ಬಾವಿಗಳಿವೆ? ಎಷ್ಟು ಕೊಳವೆ ಬಾವಿಗಳನ್ನು ಮುಚ್ಚಲಾಗಿದೆ? ಸುರಕ್ಷತಾ ಕ್ರಮಗಳಿಗೆ ತೆಗದುಕೊಂಡಿರುವ ಮುನ್ನೆಚ್ಚರಿಕಾ ಕ್ರಮಗಳ್ಯಾವವು? ಈ ಬಗ್ಗೆ ಸರ್ಕಾರ ಏನು ಮಾಡಿದೆ?

ನಿಷ್ಪ್ರಯೋಜಕ ತೆರೆದ ಕೊಳವೆ ಬಾವಿಗಳನ್ನು ಮುಚ್ಚಲು ಸ್ಪಷ್ಟಸಂದೇಶ ನೀಡಿರುವ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಎಚ್ ವಾಘೇಲಾ, ನ.7ರೊಳಗೆ ವಿಸ್ತೃತ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದ್ದಾರೆ.

ಯಾವುದೇ ಅವಘಡ ಸಂಭವಿಸಿದ್ದಲ್ಲಿ ಅಥವಾ ನಿಷ್ಪ್ರಯೋಜಕ ತೆರೆದ ಬಾವಿಗಳನ್ನು ಮುಚ್ಚದಿದ್ದರೆ ಅಧಿಕಾರಿಗಳನ್ನೇ ಹೊಣೆ ಮಾಡಲು ಹೈಕೋರ್ಟ್ ವಿಭಾಗೀಯ ಪೀಠ ಆದೇಶಿಸಿದೆ.

ರಾಜ್ಯದಲ್ಲಿ ಹೆಚ್ಚುತ್ತಿರುವ ತೆರೆದ ಬಾವಿ ದುರಂತಗಳನ್ನು ಗಂಭೀರವಾಗಿ ಪರಿಗಣಿಸಿ ಸ್ವಯಂ ಪ್ರೇರಿತ ಅರ್ಜಿ ದಾಖಲಿಸಿಕೊಂಡಿದ್ದ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ಕಾಲಮಿತಿಯಲ್ಲಿ ಕೆಲಸ ಮಾಡುವಂತೆ ನಿರ್ದೇಸಿಸಿದೆ.

ಕೋರ್ಟ್‌ನ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ ಸರ್ಕಾರಿ ವಕೀಲರು, ರಾಜ್ಯದಲ್ಲಿ ಒಟ್ಟು ಒಂದೂವರೆ ಲಕ್ಷ ತೆರೆದ ಬಾವಿಗಳಿರುವುದು ಗಮನಕ್ಕೆ ಬಂದಿದೆ. ಆದರೆ, ಖಾಸಗಿ ಭೂಮಿಯಲ್ಲಿರುವ ತೆರೆದ ಬಾವಿಗಳನ್ನು ಗುರುತಿಸಬೇಕಿದೆ.

ಪಂಚಾಯತ್‌ರಾಜ್ ಇಲಾಖೆಯ ನಾಲ್ವರು ಅಧಿಕಾರಿಗಳಿಗೆ ತೆರೆದ ಬಾವಿ ಸುರಕ್ಷತಾ ಕ್ರಮಗಳ ಜವಾಬ್ದಾರಿ ನೀಡಲಾಗಿದೆ. ಇದಲ್ಲದೇ ಅಂತರ್ಜಾಲ ಪ್ರಾಧಿಕಾರದ ವತಿಯಿಂದ ಮಾರ್ಗದರ್ಶಿ ಸೂತ್ರ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.

ಮಾರ್ಗದರ್ಶಿ ಸೂತ್ರವನ್ನು ಅಧಿಸೂಚನೆ ಮಾಡಬೇಕು ಎಂದು ಸೂಚಿಸಿರುವ ನ್ಯಾಯಪೀಠ, ಕೋರ್ಟ್ ಬಯಸಿರುವ ಎಲ್ಲ ಮಾಹಿತಿಗಳನ್ನು ವೆಬ್‌ಸೈಟ್‌ನಲ್ಲಿಯೂ ಪ್ರಕಟಿಸುವಂತೆ ಸೂಚಸಿದೆ. ಒಂದೊಮ್ಮೆ ಈ ಸುರಕ್ಷಾ ಕ್ರಮ ಜರುಗಿಸುವಲ್ಲಿ ವಿಫಲವಾದರೆ ಸಂಬಂಧಪಟ್ಟ ಅಧಿಕಾರಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡವಂತೆ ಕೋರ್ಟ್ ಆದೇಶಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement