ನಂಜಾವಧೂತ ಶ್ರೀ ವಿರುದ್ಧ ಕೇಸು
ತುಮಕೂರು: ವಿವಾದಿತ ಸ್ಥಳದಲ್ಲಿ ಕಾಂಪೌಂಡ್ ನಿರ್ಮಾಣ ಹಿನ್ನೆಲೆಯಲ್ಲಿ ಪಟ್ಟನಾಯಕನಹಳ್ಳಿ ಗುರುಗುಂಡ ಮಠದ ನಂಜಾವಧೂತ ಸ್ವಾಮೀಜಿ ಸೇರಿದಂತೆ ಮೂವರ ವಿರುದ್ಧ ಕೇಸು ದಾಖಲಾಗಿದೆ.
ಪಟ್ಟನಾಯಕನಹಳ್ಳಿಯಲ್ಲಿರುವ ರುದ್ರಭೂಮಿ ವಿವಾದ ನ್ಯಾಯಾಲಯದಲ್ಲಿದ್ದು, ಆ ವಿವಾದಿತ ಜಾಗದಲ್ಲಿ ಮಠದ ಕಡೆಯವರು ಕಾಂಪೌಂಡ್ ನಿರ್ಮಿಸುಲ ಬಂದಾಗ ಈಶ್ವರಯ್ಯ ಮತ್ತು ಅವರ ಕಡೆಯವರು ಈ ಕ್ರಮವನ್ನು ಪ್ರಶ್ನಿಸಿದ್ದಾರೆ. ಈ ಸಂಬಂಧ ವಾಕ್ಸಮರ ನಡೆದು ಘರ್ಷಣೆಯಾಗಿದೆ. ಇದರಲ್ಲಿ ಈಶ್ವರಯ್ಯ ಎಂಬುವರಿಗೆ ಗಾಯವಾಗಿದೆ.
ಕೂಡಲೇ ಅವರು ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವಿವಾದಿತ ಜಾಗದಲ್ಲಿ ಮಠದ ಕಡೆಯವರು ಜೆಸಿಬಿ ಯಂತ್ರದ ಮೂಲಕ ಕಾಂಪೌಂಡ್ ನಿರ್ಮಿಸಲು ಮುಂದಾದರು. ಇದನ್ನು ಪ್ರಶ್ನಿಸಿದ್ದಕ್ಕೆ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಇದಕ್ಕೆ ಪಟ್ಟನಾಯಕನಹಳ್ಳಿ ಶ್ರೀ ಮಠದ ನಂಜಾವಧೂತ ಶ್ರೀ, ತಿಪ್ಪೇಸ್ವಾಮಿ ಹಾಗೂ ರಾಮಲಿಂಗಪ್ಪ ಅವರ ಕುಮ್ಮಕ್ಕು ಇದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಮಧ್ಯೆ ಮಠದ ಕಡೆಯವರು ಕೂಡ ಪ್ರತಿ ದೂರು ದಾಖಲಿಸಿದ್ದಾರೆ.