ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಮಳೆಯಲ್ಲಿ ಕೊಚ್ಚಿ ಹೋಗಿದ್ದ ಬಾಲಕಿಯ ಶವ ಪತ್ತೆ

ನಗರದಲ್ಲಿ ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ಬನ್ನೇರುಘಟ್ಟರಸ್ತೆ ಬಿಳೇಕಹಳ್ಳಿಯಲ್ಲಿ ಕಾಲು ಜಾರಿ...

Rashmi Kasaragodu
Updated On : 9 Oct 2014, 9:29 am

ಬೆಂಗಳೂರು: ನಗರದಲ್ಲಿ ಸೋಮವಾರ ರಾತ್ರಿ  ಸುರಿದ ಭಾರಿ ಮಳೆಗೆ ಬನ್ನೇರುಘಟ್ಟರಸ್ತೆ ಬಿಳೇಕಹಳ್ಳಿಯಲ್ಲಿ ಕಾಲು ಜಾರಿ ದೊಡ್ಡಮೋರಿಗೆ ಬಿದ್ದ 8 ವರ್ಷದ ಬಾಲಕಿ ಗೀತಾಲಕ್ಷ್ಮಿ ನೀರಿನಲ್ಲಿ ಕೊಚ್ಚಿ  ಹೋಗಿದ್ದು, ಆಕೆಯ ಶವ ಬುಧವಾರ ಪತ್ತೆಯಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಿಬ್ಬಂದಿ ಗೀತಾಲಕ್ಷ್ಮಿಗಾಗಿ ಶೋಧ ನಡೆಸಿದ್ದು, ಇಂದು ಮಡಿವಾಳ ಕೆರೆಯಲ್ಲಿ  ಬಾಲಕಿಯ ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಏನಿದು ಪ್ರಕರಣ? :

ಸೋಮವಾರ ಸಂಜೆ 7.30 ಸುಮಾರಿಗೆ ಬಾಲಕಿ ಅತ್ತೆಯೊಂದಿಗೆ ಹೊರಗೆ ಹೋಗಿದ್ದಳು. ಸ್ನೇಹಿತರನ್ನು ಭೇಟಿ ಮಾಡಿ ವಾಪಸ್ ಬರುವಾಗ ಜೋರಾಗಿ ಮಳೆ ಆರಂಭವಾಗಿದೆ. ಈ ವೇಳೆ ಇಬ್ಬರೂ ಕೈ ಹಿಡಿದುಕೊಂಡು ಮನೆ ಕಡೆ ಹೋಗಲು ಆರಂಭಿಸಿದ್ದಾರೆ. ಬಿಳೇಕಹಳ್ಳಿ ಕಲ್ಯಾಣಿ ಮೋಟರ್ಸ್ ಸಮೀಪ ಫುಟ್‌ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಆಕಸ್ಮಿಕವಾಗಿ ಜಾರಿ ನೀರಿಗೆ ಬಿದ್ದು  ಕೊಚ್ಚಿ ಹೋಗಿದ್ದಾಳೆ. ಜತೆಗಿದ್ದ ಅತ್ತೆ ಬಾಲಕಿಯ ಕೈ ಹಿಡಿದು ಎಳೆದುಕೊಳ್ಳಲು ಯತ್ನಿಸಿದರೂ ಸಾಧ್ಯವಾಗಿಲ್ಲ, ಬಾಲಕಿ ಜಾರಿ ಬಿದ್ದ ವೇಳೆ ಮಳೆ ಜೋರಾಗಿದ್ದ ಕಾರಣ ರಕ್ಷಿಸಲು ಸಾಧ್ಯವಾಗಿಲ್ಲ ಎಂದು ಬಾಲಕಿಯ ಅತ್ತೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement