ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಧಾರಾಕಾರ ಮಳೆಗೆ ಮತ್ತೆ ಮೂರು ಬಲಿ

ನಗರದಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ಮೂವರ ಬಲಿಯಾಗಿದ್ದಾರೆ...

Rashmi Kasaragodu
Updated On : 10 Oct 2014, 9:25 am

ಬೆಂಗಳೂರು: ನಗರದಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ಮೂವರ ಬಲಿಯಾಗಿದ್ದಾರೆ. ರಾತ್ರಿಯಿಡೀ ಸುರಿದ ಧಾರಾಕಾರ ಮಳೆಯಿಂದ ಕಟ್ಟಡವೊಂದು ಕುಸಿದು ತಂದೆ, ಮಗ ಮೃತಪಟ್ಟರೆ, ವಿದ್ಯುತ್ ಸ್ಪರ್ಶದಿಂದ ಅಡುಗೆ ಭಟ್ಟನೊಬ್ಬ ಸಾವಿಗೀಡಾಗಿದ್ದಾನೆ.

ಸತತ 6 ತಾಸಿಗೂ ಹೆಚ್ಚು ಕಾಲ ಸುರಿದ ಮಳೆಯಿಂದ ನಗರದ 7ಕ್ಕೂ ಅಧಿಕ ತಗ್ಗು ಪ್ರದೇಶಗಳ 500ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು. ಇಡೀ ನಗರದಲ್ಲಿ ಸುಮಾರು 11 ಸೆ.ಮೀ ಮಳೆಯಾಗಿದ್ದು, ನಗರ ಕೇಂದ್ರ ಭಾಗ ಮತ್ತು ದೇವನಹಳ್ಳಿಯಲ್ಲಿ ತಲಾ 6 ಸೆ.ಮೀ ಮಳೆ ಸುರಿದಿದೆ. ಅನೇಕ ಬಡಾವಣೆಗಳಲ್ಲಿ ಗುರುವಾರ ಮಧ್ಯಾಹ್ನವೂ ನೀರು ಹೊರ ತೆಗೆಯುವ ಕಾರ್ಯ ನಡೆದಿತ್ತು. ಅದರಲ್ಲೂ ಸಿ.ವಿ. ರಾಮನ್ ನಗರ, ಕಗ್ಗದಾಸಪುರ, ಆನೆಪಾಳ್ಯ, ಯಲಹಂಕದ ಅಲ್ಲಾಳಸಂದ್ರ, ನಾಗವಾರ, ಬಾಣಸವಾಡಿ ಸೇರಿದಂತೆ ಅನೇಕ ಕಡೆ ಮಳೆಯ ನೀರು ಮನೆಗಳ ಸಾಮಾನುಗಳು ಬೀದಿಗೆ ಬರುವಂತೆ ಮಾಡಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement