ನೊಂದ 20ಕ್ಕೂ ಹೆಚ್ಚು ಮಹಿಳೆಯರಿಂದ ಗುರುಮೂರ್ತಿ ವಿರುದ್ಧ ಪ್ರತ್ಯೇಕ ಕೇಸ್
ಬೆಂಗಳೂರು: ಸಂತಾನಹೀನತೆಯಿಂದ ಬಳಲುತ್ತಿರುವವರಿಗೆ ಸಂತಾನ ಭಾಗ್ಯ ಕಲ್ಪಿಸುವುದಾಗಿ ನಂಬಿಸಿ ಲಕ್ಷಾಂತರ ರುಪಾಯಿ ಪಡೆದು ವಂಚಿಸುತ್ತಿದ್ದ ಸೃಷ್ಠಿ ಗ್ಲೋಬಲ್ ಟ್ರಸ್ಟ್ ಮುಖ್ಯಸ್ಥ ಕೆ.ಟಿ ಗುರುಮೂರ್ತಿ ವಿರುದ್ಧ ನೊಂದ 20ಕ್ಕೂ ಹೆಚ್ಚು ಮಹಿಳೆಯರು ಪ್ರತ್ಯೇಕ ಕೇಸು ದಾಖಲಿಸಲು ಮುಂದಾಗಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಜಂಟಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ರನ್ನು ಭೇಟಿ ಮಾಡಿದ ನೊಂದ ಮಹಿಳೆಯರು ಗುರುಮೂರ್ತಿ ವಿರುದ್ಧ ದೂರು ನೀಡಲು ಮುಂದಾದರು. ಈ ವೇಳೆ ನಿಂಬಾಳ್ಕರ್ ಅವರು ನೊಂದ ಮಹಿಳೆಯರಿಗೆ ಪ್ರತ್ಯೇಕ ದೂರು ದಾಖಲಿಸುವಂತೆ ಸೂಚಿಸಿದ್ದು, ನೊಂದ ಮಹಿಳೆಯರು ಕಾಮಾಕ್ಷಿಪಾಳ್ಯ ಪೊಲೀಸ್ ಯಲ್ಲಿ ದಾಖಲಿಸಿದ್ದಾರೆ
ಗುರುಮೂರ್ತಿಯಿಂದ ವಂಚನೆಗೊಳಗಾದ ಮಹಿಳೆಯೊರ್ವರು ನಿಂಬಾಳ್ಕರನ್ನು ಭೇಟಿ ಮಾಡಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದ್ದು, ಗುರುಮೂರ್ತಿಯಿಂದ ವಂಚನೆಗೆ ಒಳಗಾಗಿದ್ದು, ಅಧಿಕಾರಿಗಳ ಮುಂದೆ ತಮ್ಮ ನೋವನ್ನು ತೊಡಿಕೊಂಡೆವು. ಆಗ ನಿಂಬಾಳ್ಕರವರು ನಮಗೆ ಪ್ರತ್ಯೇಕ ದೂರು ದಾಖಲಿಸುವಂತೆ ಸೂಚಿಸಿದರು ಎಂದಿದ್ದಾರೆ.
ಧನ್ ಬೊಸ್ಕೋ ಎಂಬುವರು ನೀಡಿದ ದೂರಿನ ಮೇಲೆ ಆರೋಪಿ ಕೆ.ಟಿ ಗುರುಮೂರ್ತಿ ವಿರುದ್ಧ ಬಾಡಿಗೆ ತಾಯಿ ದಂಧೆ, ಈಗ ತಾನೇ ಜನಿಸಿದ ಮಕ್ಕಳ ಅಪಹರಣ ಹಾಗೂ ಮಾರಾಟಕ್ಕಾಗಿ ಮಾನವ ಕಳ್ಳಸಾಗಣೆ ಪ್ರಕರಣ ದಾಖಲಿಸಿ, ಗುರುಮೂರ್ತಿಯನ್ನು ಬಂಧಿಸಲಾಗಿದೆ.