ಜಯಾ ವರ್ಗಾವಣೆ ಪಿಐಎಲ್ಗೆ ತರಾಟೆ
ಅಕ್ರಮ ಆಸ್ತಿ ಸಂಪಾದನೆಗೆ ಸಂಬಂಧಿಸಿದಂತೆ ಜೈಲು ಪಾಲಾಗಿರುವ ತಮಿಳುನಾಡಿನ ಮಾಜಿ...
ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆಗೆ ಸಂಬಂಧಿಸಿದಂತೆ ಜೈಲು ಪಾಲಾಗಿರುವ ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅವರನ್ನು ತಮಿಳುನಾಡು ಜೈಲಿಗೆ ವರ್ಗಾಯಿಸಬೇಕೆಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತು.
ಅಪರಾಧಿ ಜಯಲಲಿತಾರನ್ನು ತಮಿಳನಾಡಿಗೆ ವಗರ್ದಾಯಿಸಬೇಕೆಂದು ಕೋರಿ ಮೈಸೂರಿನ ಆರ್. ಹೊಯ್ಸಳ, ಹರೀಶ್ ರಾವ್ ಎಂಬುವರು ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾ.ಕೆ.ಎಲ್ ಮಂಜುನಾಥ್ ವಿಭಾಗೀಯ ಪೀಠ, ಅರ್ಜಿಯನ್ನು ಈ ಹಂತದಲ್ಲಿ ಪರಿಗಣಿಸಲು ಸಾಧ್ಯವಿಲ್ಲ ಎಂದಿದೆ. ಅಲ್ಲದೇ ಅರ್ಜಿದಾರು ಅರ್ಜಿ ಹಿಂಪಡೆಯದಿದ್ದರೆ ರು.1 ಲಕ್ಷ ದಂಡ ವಿಧಿಸುವುದಾಗಿ ಪೀಠ ಎಚ್ಚರಿಸಿದ್ದರಿಂದ ಅರ್ಜಿದಾರರು ಅರ್ಜಿ ಹಿಂಪಡೆದುಕೊಂಡರು.