ಮಿಲನ ಕಾದಾಟದಲ್ಲಿ ಗಾಯಗೊಂಡಿದ್ದ ಹೆಣ್ಣು ಹುಲಿ ಸಾವು
ಕುತ್ತಿಗೆ ಕಚ್ಚಿ ಗಾಯಗೊಳಿಸಿದ್ದ ಗಂಡು ಹುಲಿ
ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಮಿಲನದಲ್ಲಿ ತೊಡಗಿದ್ದ ಗಂಡು ಹುಲಿ ಹೆಣ್ಣು ಹುಲಿಯ ಮೇಲೆ ದಾಳಿ ನಡೆಸಿದೆ. ಗಂಡು ಹುಲಿ ಕುತ್ತಿಗೆಗೆ ಕಚ್ಚಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದ ಹೆಣ್ಣು ಹುಲ್ಲಿ ಬಂಟಿ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಮಧ್ಯಾಹ್ನ ಸಾವನ್ನಪ್ಪಿದೆ.
ಮಿಲನಕ್ಕೆ ಉತ್ಸುಕವಾಗಿರುವ ಗಂಡು ಹುಲಿ ರಾತ್ರಿಯಿಂದಲೇ ವಿಚಿತ್ರವಾಗಿ ವರ್ತಿಸುತ್ತಿತ್ತು. ಬೆಳಗ್ಗಿನ ಜಾವ 7ರ ಹರೆಯದ ಗಂಡು ಹುಲಿ ಕುಮಾರ್ ಜತೆ 5 ವರ್ಷದ ಹೆಣ್ಣು ಹುಲಿ ಬಂಟಿಯನ್ನು ಉದ್ಯಾನವನದಲ್ಲಿ ಬಿಡಲಾಯಿತು. ಮಧ್ಯಾಹ್ನದವರೆಗೂ ಒಂದ್ಕೊಂದು ಜತೆಯಾಗುವುದು, ಹೊರಳಾಡುವುದು, ಹೋರಾಡುವುದು ನಡೆದೇ ಇತ್ತು. ನಿಸರ್ಗಧಾಮಕ್ಕೆ ಬಂದವರು. ಆದರೆ, ಏಕಾಏಕಿ ಗಂಡು ಹುಲಿ ವ್ಯಗ್ರವಾಗಿ ಹೆಣ್ಣು ಹುಲಿ ಮೇಲೆ ತೀವ್ರ ದಾಳಿ ನಡೆಸಿದೆ. ಕುತ್ತಿಗೆಯನ್ನು ಕಚ್ಚಿ ಹಿಡಿದಿದೆ. ರಕ್ತ ಸೋರಿ ಗಂಭೀರ ಸ್ಥಿತಿಯಲ್ಲಿದ್ದ ಹುಲಿಯನ್ನು ಕಂಡು ನಿಸರ್ಗಧಾಮ ಅಧಿಕಾರಿಗಳು ಬೇರ್ಪಡಿಸಿ ಹೆಣ್ಣು ಹುಲಿಗೆ ಚಿಕಿತ್ಸೆ ನೀಡುತ್ತಿದ್ದರು.
'ಇದೇ ಮೊದಲ ಬಾರಿಗೆ ಇವೆರಡು ಮಿಲನ ಕ್ರಿಯೆಗೆ ಮುಂದಾಗಿವೆ. ಹೆಚ್ಚಾಗಿ ಹುಲಿ ಒಬ್ಬೊಂಟಿಯಾಗಿ ಇರಲು ಯತ್ನಿಸುತ್ತದೆ. ಬೇರೆ ಹುಲಿಗಳು ಇಷ್ಟ ಆಗೋದಿಲ್ಲ. ಮೃಗಾಲಯದಲ್ಲಿ ಸ್ವಲ್ಪ ಹೊಂದಿಕೊಳ್ಳುತ್ತವೆ. ನಮ್ಮಲ್ಲಿ 9 ಹುಲಿಗಳಿವೆ, ಅದರಲ್ಲಿ ನಾಲ್ಕು ಹುಲಿಗಳು ಒಂದು ಗುಂಪು, ಇನ್ನು ಐದು ಹುಲಿಗಳು ಇನ್ನೊಂದು ಗುಂಪಿನಲ್ಲಿವೆ. ಬಂಟಿ ಜತೆ ಹೊಂದಿಕೊಂಡಿದ್ದ ಹಿನ್ನೆಲೆಯಲ್ಲಿ ಕುಮಾರನನ್ನು ಜತೆಯಾಗಿ ಬೆಳಗ್ಗೆ ಬಿಟ್ಟೆವು. ಮಿಲನ ಕ್ರಿಯೆ ಸಹಜವಾಗಿಯೇ ತೊಡಗಿಕೊಂಡಿದ್ದವು. ಆದರೆಸ ಸಂಜೆ ವೇಳೆ ಈ ರೀತಿ ಆಗಿದೆ' ಎಂದು ಪಿಲಿಕುಳ ನಿಸರ್ಗಧಾಮ ನಿರ್ದೇಶಕ ಜಯಪ್ರಕಾಶ್ ಭಂಡಾರಿ ತಿಳಿಸಿದ್ದಾರೆ.