ರಾಮದಾಸ್ ನನ್ನನ್ನು ಮದುವೆಯಾಗಬೇಕು: ಪ್ರೇಮಕುಮಾರಿ
ಮಾಜಿ ಸಚಿವ ರಾಮದಾಸ್ ನನ್ನನ್ನು ಮದುವೆಯಾಗಬೇಕು ಎಂದು ಪ್ರೇಮಕುಮಾರಿ...
ಮೈಸೂರು: ಮಾಜಿ ಸಚಿವ ರಾಮದಾಸ್ ನನ್ನನ್ನು ಮದುವೆಯಾಗಬೇಕು ಎಂದು ಪ್ರೇಮಕುಮಾರಿ ಆಗ್ರಹಿಸಿದ್ದಾರೆ.
ನನ್ನೊಂದಿಗೆ ರಾಮದಾಸ್ ಸಂಭಾಷಣೆ ನಡೆಸಿರುವುದು ಸಾಬೀತಾಗಿದೆ. ಹಾಗಾಗಿ, ಅವರು ನನ್ನನ್ನು ಮದುವೆಯಾಗಬೇಕು ಎಂದು ಅವರು ತಿಳಿಸಿದ್ದಾರೆ.
ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಧ್ವನಿ ಪರೀಕ್ಷೆ ನಡೆಸಲಾಗಿತ್ತು. ಅದು ಸಾಬೀತಾಗಿದೆ. ರಾಮದಾಸ್ ನನಗೆ ವಂಚಿಸಿದ್ದಾರೆ. ನಾನು ಕಾನೂನು ಹೋರಾಟವನ್ನು ಮುಂದುವರೆಸುವೆ.
ನಾನು ಅವರ ರಾಜಕೀಯ ಭವಿಷ್ಯ ಹಾಳು ಮಾಡಿದ್ದೇನೆಂದುಕೊಂಡು ಅವರು, ನನ್ನ ಭವಿಷ್ಯ ಹಾಳು ಮಾಡುತ್ತಿದ್ದಾರೆ. ನಾನು ಬಿಗ್ಬಾಸ್ನಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ರಾಮದಾಸ್ ಇದಕ್ಕೆ ನ್ಯಾಯಾಲಯದಿಂದ ತಡೆ ತಂದಿದ್ದರು ಎಂದು ಆರೋಪಿಸಿದ್ದಾರೆ.
ರಾಮದಾಸ್ ಪ್ರಕರಣ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಪ್ರಕರಣವನ್ನು ಬಿಜೆಪಿ ಗಮನಿಸುತ್ತಿದೆ. ಸದ್ಯಕ್ಕೆ ಮಾಜಿ ಸಚಿವ ರಾಮದಾಸ್ ವಿರುದ್ಧ ಕ್ರಮ ತೆಗೆದುಕೊಳ್ಳುವುದಿಲ್ಲ. ವಾಸ್ತವವಾಗಿ ಏನು ನಡೆದಿದೆ ಎಂದು ಮೊದಲು ತಿಳಿಯಬೇಕು. ಸತ್ಯಾಸತ್ಯತೆ ಹೊರಬರಬೇಕಿದೆ. ತದ ನಂತರ ಕ್ರಮದ ಬಗ್ಗೆ ಚಿಂತಿಸಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ.