ಐಎಎಸ್ ಅಧಿಕಾರಿ ರಶ್ಮಿ ಅವರಿಗೆ ಚಪ್ಪಲಿ ಏಟು
ಮೈಸೂರು: ಮೈಸೂರಿನ ಆಡಳಿತ ಮತ್ತು ತರಬೇತಿ ಸಂಸ್ಥೆ ಮಹಾನಿರ್ದೇಶಕ ರಶ್ಮಿ ಮಹೇಶ್ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ ಘಟನೆ ಬುಧವಾರ ನಡೆದಿದೆ.
ಹಿರಿಯ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಸಂಸ್ಥೆಯ ಮೇಲ್ವಿಚಾರಕ ವೆಂಕಟೇಶ್ ನೀರಿನ ಸಂಪಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅಂತಿಮ ದರ್ಶನಕ್ಕೆ ರಶ್ಮಿ ಮಹೇಶ್ ಅವರು ಬಂದಿದ್ದಾಗ ರೊಚ್ಚಿಗೆದ್ದ ವೆಂಕಟೇಶ್ ಸಂಬಂಧಿಕರು ಅವರ ಮೇಲೆ ಹಲ್ಲೆ ಮಾಡಿದ್ದಾರೆ.
ಅಂತಿಮ ದರ್ಶನಕ್ಕೆ ಬಂದಿದ್ದ ರಶ್ಮಿ ಅವರು ಕಾರು ಇಳಿಯುತ್ತಿದ್ದಂತೆ ವೆಂಕಟೇಶ್ ಸಂಬಂಧಿಕರು ಅವರಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ. ಪುನಃ ಅವರನ್ನು ಅಡ್ಡಗಟ್ಟಿ ಅವರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ರಶ್ಮಿ ಅವರನ್ನು ಸ್ಥಳದಿಂದ ಕರೆದೊಯ್ದರು.