ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಪೀಠತ್ಯಾಗ ಮಾಡಲ್ಲ: ಮೂಜಗ

ಮೂರು ಸಾವಿರ ಮಠದ ಉನ್ನತ ಸಮಿತಿ ಎದುರು ತಾವು...

Mainashree
Updated On : 15 Oct 2014, 12:31 pm

ಹುಬ್ಬಳ್ಳಿ: ಮೂರು ಸಾವಿರ ಮಠದ ಉನ್ನತ ಸಮಿತಿ ಎದುರು ತಾವು ಪೀಠ ತ್ಯಾಗ ಮಾಡುವ ನಿರ್ಧಾರ ವ್ಯಕ್ತಪಡಿಸಿದ್ದ ಶ್ರೀ ಗುರುಸಿದ್ಧ ರಾಜಯೋಗೀಂದ್ರ, ಇದೀಗ ಪೀಠತ್ಯಾಗ ಮಾಡಲ್ಲ ಎಂದು ಹೇಳಿದ್ದಾರೆ.

ಬುಧವಾರ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮೂರು ಸಾವಿರ ಮಠದ ಪೀಠಾಧೀಶನಾಗಿ ಮುಂದುವರೆಯುವೆ. ಭಕ್ತರ ಒತ್ತಾಯದಂತೆ ಪೀಠದಲ್ಲಿ ಮುಂದುವರೆಯಲು ನಿರ್ಧರಿಸಿದ್ದೇನೆ ಎಂದು ಗುರುಸಿದ್ಧ ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ.

ಉತ್ತರ ಕರ್ನಾಟಕದ ವಿರಕ್ತ ಪೀಠಗಳ ಪರಂಪರೆಯಲ್ಲಿ ಹುಬ್ಬಳ್ಳಿಯ ಮೂರು ಸಾವಿರ ಮಠದ ಪೀಠಾಧೀಶ ಶ್ರೀ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಅವರು ಪೀಠ ತ್ಯಜಿಸಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದರು. ಇದಕ್ಕೆ ಇಂದು ಸ್ಪಷ್ಟನೆ ನೀಡಿದ ಸ್ವಾಮೀಜಿ, ಯೋಗ, ಧ್ಯಾನದ ಬಗ್ಗೆ ಒಲವು ಹೆಚ್ಚಿದ್ದರಿಂದ ಪೀಠತ್ಯಾಗ ಮಾಡುವ ಕುರಿತು ನಿರ್ಧರಿಸಿದ್ದೆ. ಆದರೆ ಈಗ ನನ್ನ ನಿರ್ಧಾರ ಬದಲಿಸಿದ್ದೇನೆ ಎಂದು ತಿಳಿಸಿದ್ದಾರೆ.

ಪೀಠ ತ್ಯಜಿಸುವಂತೆ ನನ್ನ ಮೇಲೆ ಯಾರ ಒತ್ತಡವೂ ಇರಲಿಲ್ಲ. ದಿಂಗಾಲೇಶ್ವರ ಶ್ರೀ ನನಗೆ ಹಣ ನೀಡಿದ್ದಾರೆಂಬ ಆರೋಪ ಶುದ್ಧ ಸುಳ್ಳು. ಈ ವದಂತಿ ಹರಡಿಸಿರುವವರು ಮೂರ್ಖರು ಎಂದ ಅವರು ಶೀಘ್ರದಲ್ಲಿ ಮೂರು ಸಾವಿರ ಮಠಕ್ಕೆ ಉತ್ತರಾಧಿಕಾರಿ ನೇಮಿಸುತ್ತೇನೆ ಎಂದು ಹೇಳಿದ್ದಾರೆ.

ಭಕ್ತರ ಸಭೆ ಕರೆದು ಉತ್ತರಾಧಿಕಾರಿ ನೇಮಕದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ದಿಂಗಾಲೇಶ್ವರ ಶ್ರೀ ಅವರನ್ನು ಉತ್ತರಾಧಿಕಾರಿ ಮಾಡುವುದು ನನ್ನ ಇಚ್ಛೆಯಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement