ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

3 ದಿನದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಾಳೆಯಿಂದ

ಪ್ರೇಸ್ಕ್ಲಬ್ ಸಹಯೋಗದೊಂದಿಗೆ ಅಸೀಮ ಟ್ರಸ್ಟ್ ಹಾಗೂ ಚೆನ್ನೈನ ಯುಎಸ್ಕಾನ್ಸುಲೇಟ್...

Mainashree
Updated On : 16 Oct 2014, 2:47 am

ಬೆಂಗಳೂರು: ಪ್ರೇಸ್ಕ್ಲಬ್ ಸಹಯೋಗದೊಂದಿಗೆ ಅಸೀಮ ಟ್ರಸ್ಟ್ ಹಾಗೂ ಚೆನ್ನೈನ ಯುಎಸ್ಕಾನ್ಸುಲೇಟ್ ವತಿಯಿಂದ ಅಕ್ಟೋಬರ್ 17ರಿಂದ 19 ವರೆಗೆ ನಗರದಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜಿಸಲಾಗಿದೆ.

ಸುಚಿತ್ರಾ ಚಿತ್ರ ಸಂಸ್ಥೆಯಲ್ಲಿ ನಡೆಯುವ ಚಲನಚಿತ್ರೋತ್ಸವದಲ್ಲಿ 6 ಚಲನಚಿತ್ರ, 10 ಕಿರುಚಿತ್ರ, 7 ಸಾಕ್ಷ್ಯ ಚಿತ್ರಗಳ ಪ್ರದರ್ಶನದ ಜೊತೆಗೆ ಪತ್ರಿಕೋದ್ಯಮದ ಸವಾಲಗುಳು ಸೇರಿದಂತೆ ವಿವಿಧ ವಿಚಾರಗಳ ಕುರಿತು ತಜ್ಞರೊಂದಿಗೆ ಸಂವಾದಗಳು ನಡೆಯಲಿವೆ ಎಂದು ಚಲನಚಿತ್ರೋತ್ಸವದ ಆಯೋಜಕರು ಹಾಗೂ ಕಲಾತ್ಮಕ ಚಿತ್ರಗಳ ನಿರ್ದೇಶಕಿ ಉಮಾವಂಗಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಡೇನಿಯಲ್ ಪರ್ಲ್ ಮಂತ್ ಹೆಸರಿನಲ್ಲಿ ನಡೆಯುತ್ತಿರುವ ಉತ್ಸವದಲ್ಲಿ ಅಮೆರಿಕ, ಇಂಗ್ಲೆಂಡ್, ತೈವಾನ್, ಡೆನ್ಮಾರ್ಕ್ ದೇಶಗಳ ಚಿತ್ರ ನಿರ್ಮಾಪಕರು, ನಿರ್ದೇಶಕರು ಭಾಗವಹಿಸುತ್ತಿದ್ದಾರೆ. ವಿಶೇಷವಾಗಿ ಪತ್ರಿಕೋದ್ಯಮದ ವಿವಿಧ ಸವಾಲುಗಳನ್ನು ಪ್ರದರ್ಶಿಸುವ ಮೊಟ್ಟಮೊದಲ ಚಲನಚಿತ್ರೋತ್ಸವ ಇದಾಗಿದ್ದು, 9 ಅಂತಾರಾಷ್ಟ್ರೀಯ ಚಿತ್ರಗಳು ಭಾರತದಲ್ಲಿ ಇದೇ ಮೊದಲು ಪ್ರದರ್ಶನಗೊಳ್ಳುತ್ತಿವೆ ಎಂದರು.

ಅ.17ರಂದು ಸುಚಿತ್ರಾ ಚಿತ್ರ ಸಂಸ್ಥೆಯಲ್ಲಿ ಚಿತ್ರಗಳ ಪ್ರದರ್ಶನ ಶುರುವಾದರೂ, ಅಂದೇ ಸಂಜೆ 6.30ಕ್ಕೆ ಪ್ರೆಸ್ ಕ್ಲಬ್ ಚಿತ್ರೋತ್ಸವ ಉದ್ಘಾಟನೆ ನಡೆಯಲಿದೆ.

ಪ್ರೆಸ್ಕ್ಲಬ್ ಅಧ್ಯಕ್ಷ ಶ್ರೀಧರ್ ಮಾತನಾಡಿ, ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಪ್ರೆಸ್ ಕ್ಲಬ್ ಸಹಾಯ ನೀಡಿದೆ. ಅಸೀಮ ಟ್ರಸ್ಟ್ಗೆ ನೆರವು ನೀಡಿರುವುದು ಖುಷಿ ತಂದಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement