ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ರಾಜ್ಯದಲ್ಲಿ ಶೀಘ್ರ 2 ಇ-ಕೋರ್ಟ್

ರಾಜ್ಯದಲ್ಲಿ ಶೀಘ್ರವೇ ಎರಡು ಇ-ಕೋರ್ಟ್ ಸ್ಫಾಪಿಸುವುದಾಗಿ ಹೈಕೋರ್ಟ್‌ನ...

Mainashree
Updated On : 16 Oct 2014, 9:22 am

ಕನ್ನಡಪ್ರಭವಾರ್ತೆ, ಬೆಂಗಳೂರು, ಅ.15:
ರಾಜ್ಯದಲ್ಲಿ ಶೀಘ್ರವೇ ಎರಡು ಇ-ಕೋರ್ಟ್ ಸ್ಫಾಪಿಸುವುದಾಗಿ ಹೈಕೋರ್ಟ್‌ನ ನ್ಯಾಯಮೂರ್ತಿ ವೇಣುಗೋಪಾಲ್ ಗೌಡ ತಿಳಿಸಿದ್ದಾರೆ.

ಹೈಕೋರ್ಟ್‌ನಲ್ಲಿ ನೂತನವಾಗಿ ಆರಂಭಿಸಿರುವ ಇ-ಗ್ರಂಥಾಲಯ ಮತ್ತು ಗ್ರಂಥಾಲಯದ ನವೀಕರಣ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಇ-ಕೋರ್ಟ್ ಸ್ಥಾಪಿಸುವ ಬಗ್ಗೆ ಪ್ರಸ್ತಾಪಿಸಿದ ಅವರು, ಈ ರೀತಿಯಾಗಿ ಕೋರ್ಟ್ ಸ್ಥಾಪಿಸುವ ಮೂಲಕ ದೇಶದಲ್ಲೇ ಇದು ಮಾದರಿ ಆಗುವುದಾಗಿ ಅಭಿಪ್ರಾಯಪಟ್ಟರು.

ಗ್ರಂಥಾಲಯದ ಮಹತ್ವ ಹಾಗೂ ಅದರ ಪ್ರಯೋಜನ ಪಡೆದುಕೊಳ್ಳುವ ವಕೀಲರು ವಕೀಲರೇ ಅಲ್ಲ. ವಕೀಲರಾದವರಿಗೆ ಗ್ರಂಥಾಲಯದ ಜತೆ ಸಂಬಂಧ ಇರಬೇಕು. ಜ್ಞಾನ ಸಂಪಾದನೆಗೆ ಅವರು ಸದಾ ಒತ್ತು ನೀಡಬೇಕು. ಇದನ್ನು ಪಾಲಿಸದ ವಕೀಲರು ತಮ್ಮ ವೃತ್ತಿಯನ್ನು ಬಿಡುವುದೇ ಲೇಸು ಎಂದರು.

ರಾಜ್ಯ ಹೈಕೋರ್ಟ್‌ನ ಗ್ರಂಥಾಲಯದಲ್ಲಿ ಅಗತ್ಯ ಮಾಹಿತಿಯ ಪುಸ್ತಕ ಸಿಗುವುದೇ ಕಷ್ಟ ಸಾಧ್ಯವಾಗಿದೆ. ಆದರೆ ಸುಪ್ರೀಂ ಕೋರ್ಟ್‌ನ ಗ್ರಂಥಾಲಯ ಇದಕ್ಕೆ ಹೊರತಾಗಿದೆ.

ರಾಜ್ಯ ಹೈಕೋರ್ಟ್‌ನಲ್ಲಿ ಪುಸ್ತಕ ಸಿಗದೇ ಇರುವುದು ಬೇಸರದ ಸಂಗತಿ ಎಂದರು.

ರಾಜ್ಯ ಹೈಕೋರ್ಟ್‌ನ ಗ್ರಂಥಾಲಯದ ಏಳಿಗೆಗಾಗಿ ನ್ಯಾಯಮೂರ್ತಿ ವೇಣುಗೋಪಾಲ ಗೌಡ ಅವರು ಇದೇ ವೇಳೆ ರು.25 ಸಾವಿರ ದೇಣಿಗೆ ನೀಡಿದರು. ಗ್ರಂಥಾಲಯದ ಅಭಿವೃದ್ಧಿಗಾಗಿ ಇತರೆ ವಕೀಲರು ದೇಣಿಗೆ ನೀಡಿ ಸಹಕರಿಸಬೇಕೆಂದು ಕರೆ ನೀಡಿದರು.

ಗ್ರಂಥಾಲಯದ ನವೀಕರಣಕ್ಕೆ ಅಪಾರ ಪ್ರಮಾಣದ ರು.15 ಲಕ್ಷ ದೇಣಿಗೆ ನೀಡಿದ್ದ ಪಿಇಎಸ್ ಶಿಕ್ಷಣ ಸಂಸ್ಥೆಯ ರೂವಾರಿ ಪ್ರೋ. ದೊರೆಸ್ವಾಮಿ ಮಾತನಾಡಿ, 1966ರ ಆಸುಪಾಸಿನಲ್ಲಿ ತಾವು ವಕೀಲ ವೃತ್ತಿ ಆರಂಭಿಸಿದೆ. ಆದರೆ ಆಕಸ್ಮಿಕವಾಗಿ ಶಿಕ್ಷಣ ಕ್ಷೇತ್ರಕ್ಕೆ ಕಾಲಿಡಬೇಕಾಯಿತು. ಜೀವನದಲ್ಲಿ ನಾವು ಅಪೇಕ್ಷಿಸಿದಂತೆ ಆಗಲು ಸಾಧ್ಯವಿಲ್ಲ. ಆದರೆ ಮಾಡುವ ಕೆಲಸವನ್ನೇ ಸಂತೋಷದಿಂದ ಮಾಡಬೇಕು ಎಂದು ಕಿವಿ ಮಾತು ಹೇಳಿದರು.

ಏನಿದು?
ಇ-ಕೋರ್ಟ್ ಹೆಸರಿಗೆ ತಕ್ಕ ಹಾಗೆ ಕಾಗದ ಹರಿತ ಕೋರ್ಟ್ ಆಗಿದ್ದು, ಅರ್ಜಿ, ಆಕ್ಷೇಪಣೆಗಳನ್ನು ಇಂಟರ್‌ನೆಟ್ ಸಹಾಯದಿಂದ ಅಪ್ ಲೋಡ್ ಮಾಡಬಹುದು. ಅಲ್ಲದೇ ನೋಟಿಸ್, ವಾರೆಂಟ್ ಇತರೆ ಅಗತ್ಯ ದಾಖಲೆಗಳನ್ನು ಇ-ಮೇಲ್ ಮುಖಾಂತರ ರವಾನಿಸಬಹುದಾಗಿದೆ. ದೆಹಲಿಯಲ್ಲಿ ಈಗಾಗಲೇ ಈ ಯೋಜನೆ ಜಾರಿಯಲ್ಲಿದ್ದು ಕರ್ನಾಟಕ್ಕೂ ವಿಸ್ತರಿಸುವ ಮಾತು ಕೇಳಿಬರುತ್ತಿದೆ. ಕೇವಲ ಅಲ್ಪಾವಧಿಯಲ್ಲಿ ದೆಹಲಿಯ ರೈಕೋರ್ಟ್‌ನಲ್ಲಿ 7 ಇ-ಕೋರ್ಟ್ ಸ್ಫಾಪಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement