ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಸ್ವಚ್ಛ ಭಾರತಕ್ಕಾಗಿ ಹೆಲ್ತಿಜೆನ್

ಆಧುನಿಕ ತಂತ್ರಜ್ಞಾನದ ನೆರವಿನಿಂದ ಸಮುದಾಯ ನೈರ್ಮಲ್ಯ ಕಾರ್ಯಕ್ರಮಗಳಲ್ಲಿ ಯುವಕರು ಹೆಚ್ಚು ...

Rashmi Kasaragodu
Updated On : 18 Oct 2014, 9:03 am

ಬೆಂಗಳೂರು:  ಆಧುನಿಕ ತಂತ್ರಜ್ಞಾನದ ನೆರವಿನಿಂದ ಸಮುದಾಯ ನೈರ್ಮಲ್ಯ ಕಾರ್ಯಕ್ರಮಗಳಲ್ಲಿ ಯುವಕರು ಹೆಚ್ಚು ಪಾಲ್ಗೊಳ್ಳುವಂತೆ ಮಾಡಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹೇಳಿದ್ದಾರೆ.

ಹೆಲ್ತಿಜೆನ್ ಮೊಬೈಲ್ ತಂತ್ರಾಂಶ ಉದ್ಘಾಟಿಸಿ ಮಾತನಾಡಿದ ಅವರು , ಸ್ವಚ್ಛ ಭಾರತ ಅಭಿಯಾನಕ್ಕಾಗಿ ರಾಜ್ಯ ಆರೋಗ್ಯ ಇಲಾಖೆ ಈ ವಿನೂತನ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿರುವುದು ಇಡೀ ದೇಶಕ್ಕೆ ಮಾದರಿಯಾಗಿದೆ. ಸರ್ಕಾರದ ನೂತನ ತಂತ್ರಾಂಶವನ್ನು ಉಪಯೋಗಿಸಿಕೊಂಡು ನಾಗರಿಕರು ಸಕ್ರಿಯವಾಗಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ತಂತ್ರಾಂಶವನ್ನು ಸಂಪರ್ಕ ಸಾಧನವಾಗಿ ಬಳಸಿಕೊಂಡು ಸಮುದಾಯ ಆರೋಗ್ಯ ಮತ್ತು ನೈರ್ಮಲ್ಯ ಸಮಸ್ಯೆ ಗಳ ಪರಿಹಾರಕ್ಕೆ ನಾಗರಿಕರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವುದು ವಿನೂತನ, ಅತ್ಯುತ್ತಮ ಕಾರ್ಯಕ್ರಮವಾಗಿದೆ. ಈ ಯೋಜನೆಯಲ್ಲಿ ಜನರು ಹೆಚ್ಚು ಪಾಲ್ಗೊಳ್ಳುವಂತೆ ಪ್ರಚಾರ ಮಾಡಬೇಕು ಎಂದು ಸಲಹೆ ನೀಡಿದರು.

ತಂತ್ರಾಂಶದಲ್ಲಿ ಏನಿದೆ?: ಹೆಲ್ತಿಜೆನ್ ತಂತ್ರಾಂಶದ ಮೂಲಕ ನಾಗರಿಕರು ಆರೋಗ್ಯ ಮತ್ತು ನೈರ್ಮಲ್ಯದ ಸಮಸ್ಯೆಗಳನ್ನು ಸುಲಭವಾಗಿ ಇಲಾಖೆ ಗಮನಕ್ಕೆ ತರಬಹುದು. ಚಿಕುನ್ ಗುನ್ಯಾ, ಕಾಲರಾ, ಮಲೇರಿಯಾ , ಕ್ಷಯ ರೋಗ ಸೇರಿದಂತೆ ಇತರ ಮಾರಕ ರೋಗಗಳಿಗೆ ಕಾರಣವಾಗುವುದು ಸೂಕ್ಷ್ಮ ಜೀವಿಗಳು ಮತ್ತು ರೋಗವಾಹಕಗಳು ಉತ್ಪತ್ತಿಯಾಗುವ ಪ್ರದೇಶಗಳ ಬಗ್ಗೆ ಇದರ ಮೂಲಕ ಮಾಹಿತಿ ನೀಡಬಹುದು. ನಿಂತ ನೀರು, ತ್ಯಾಜ್ಯಗಳನ್ನು ಎಸೆದಿರುವ  ಪ್ರದೇಶ ಹಾಗು ಆಹಾರ ಪದಾರ್ಥಗಳನ್ನು ಕಂಡಕಂಡಲ್ಲಿ ಎಸೆದಿದ್ದರೆ ಅಂತಹ ವಿಷಯಗಳನ್ನು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರುವುದು ಹೆಲ್ತಿಜೆನ್ ತಂತ್ರಾಂಶದ ಗುರಿಯಾಗಿದೆ. ಆ್ಯಪ್ ಮೂಲಕ ಫೋಟೋಗಳನ್ನು ತೆಗೆದು ಅಧಿಕಾರಿಗಳಿಗೆ ಕಳುಹಿಸಬಹುದಾಗಿದೆ.
ಛಾಯಾಚಿತ್ರ ತೆಗೆದು ಸ್ಥಳ, ದಿನಾಂಕ ಹಾಗು ವೇಳೆಯನ್ನು ನಮೂದಿಸಬೇಕಾಗುತ್ತದೆ. ಈ ಆ್ಯಪ್ ಆ್ಯಂಡ್ರಾಯ್ಡ್‌ನಲ್ಲಿ ಸಿಗುತ್ತದೆ. ಜಿಪಿಎಸ್ ಮೂಲಕ ಸ್ಥಳದ ನಿಖರವಾದ ಮಾಹಿತಿ ಸಿಗುತ್ತದೆ. ಹೆಲ್ತಿಜೆನ್  ಆ್ಯಪ್ ಕನ್ನಡದಲ್ಲೂ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ  www.helthizen.org ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement