ಗಿನ್ನೆಸ್ ಸನಿಹದಲ್ಲಿ ತೇಜಸ್ವಿನಿ
ಗಿನ್ನೆಸ್ ಗಿರೀಶ್ ಎಂದೇ ಹೆಸರಾದ ಎಂ. ಗಿರೀಶ್ಕುಮಾರ್ ಅವರ 12 ವರ್ಷದ...
ಬೆಂಗಳೂರು: ಗಿನ್ನೆಸ್ ಗಿರೀಶ್ ಎಂದೇ ಹೆಸರಾದ ಎಂ. ಗಿರೀಶ್ಕುಮಾರ್ ಅವರ 12 ವರ್ಷದ ಮಗಳು ತೇಜಸ್ವಿನಿ ಗಿರೀಶ್ ಕೂಡ ಗಿನ್ನೆಸ್ ದಾಖಲೆಗೆ ಮುಂದಾಗಿದ್ದಾಳೆ. ಇದಕ್ಕಾಗಿ ಮೂಗಿನಲ್ಲಿ ಪೈಪ್ ತೂರಿಸಿ, ಬಾಯಿಯಲ್ಲಿ ತೆಗೆಯುವ ಕಲೆಯಲ್ಲಿ ನಿರತರಾಗಿದ್ದಾಳೆ.
ಇಂತಹ ಸಾಹಸ ಕಲೆಯನ್ನು ಶನಿವಾರ ಪ್ರೆಸ್ಕ್ಲಬ್ನಲ್ಲಿ ಪ್ರದರ್ಶಿಸುವ ಮೂಲಕ ಗಿನ್ನಿಸ್ ದಾಖಲೆಗೆ ಕಳುಹಿಸಲು ಮುಂದಾಗಿದ್ದಾಳೆ. 30 ಸೆಕೆಂಡ್ನಲ್ಲಿ 43.85 ಮೀಟರ್ ಉದ್ದದ ಸಣ್ಣ ಪೈಪನ್ನು ಮೂಗಿನಲ್ಲಿ ತೂರಿಸಿ, ಬಾಯಿಯಲ್ಲಿ ಎಳೆದಳು. ಇದನ್ನು ದಾಖಲೀಕರಿಸಿದ ತೀರ್ಪುಗಾರರಾದ ಕೃಷ್ಣಮೂರ್ತಿ, ಡಾ. ಎ.ಎಸ್ ದಿನೇಶ ಮತ್ತು ಬಿ.ಆರ್ ಕೃಷ್ಣ ಅವರನ್ನು ಗಿನ್ನೆಸ್ ದಾಖಲೆಗೆ ಕಳುಹಿಸಿಕೊಡಲು ಸಿದ್ಥತೆ ನಡೆಸಿದ್ದಾರೆ.