ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಈರುಳ್ಳಿ ಬೆಲೆ ದಿಢೀರ್ ಕುಸಿತ; ಬೀದಿಗಿಳಿದ ಬೆಳೆಗಾರ

ಈರುಳ್ಳಿ ಬೆಲೆ ಕ್ವಿಂಟಲ್‌ಗೆ ರು.1,800 ಇದ್ದುದು ದಿಢೀರನೇ ರು.100-150ಕ್ಕೆ....

Mainashree
Updated On : 21 Oct 2014, 9:29 am

ದಾವಣಗೆರೆ: ಈರುಳ್ಳಿ ಬೆಲೆ ಕ್ವಿಂಟಲ್‌ಗೆ ರು.1,800 ಇದ್ದುದು ದಿಢೀರನೇ ರು.100-150ಕ್ಕೆ ಕುಸಿತ ಕಂಡ ಹಿನ್ನೆಲೆಯಲ್ಲಿ ನಗರದ ಈರುಳ್ಳಿ ಮಾರುಕಟ್ಟೆ ವರ್ತಕರು, ದಲ್ಲಾಳಿಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ರೈತರು ಇಲ್ಲಿನ ಹಳೆ ಪಿ.ಬಿ ರಸ್ತೆಯಲ್ಲಿ ರಸ್ತೆತಡೆ ನಡೆಸಿದರು.

ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಹಾವೇರಿ ಸೇರಿ ವಿವಿಧ ಜಿಲ್ಲೆಗಳಿಂದ ಈರುಳ್ಳಿ ತಂದಿದ್ದ ರೈತರು ಬೆಲೆ ಕುಸಿತದಿಂದ ಆಕ್ರೋಶಗೊಂಡು ಹೋರಾಟದ ಹಾದಿ ತುಳಿದರು.

ಬೆಂಗಳೂರು, ಚಿತ್ರದುರ್ಗದಲ್ಲಿ ಇಂದೂ ಕ್ವಿಂಟಲ್‌ಗೆ ರು.1,800-2,000 ಬೆಲೆ ಇದೆ. ದಾವಣಗೆರೆ ಮಾರುಕಟ್ಟೆ ದೊಡ್ಡದೆಂದು ಇಲ್ಲಿಗೆ ಬಂದರೆ, ರೈತರನ್ನು ಶೋಷಣೆ ಮಾಡುವ ಷಡ್ಯಂತ್ರ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement