ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಬ್ರಿಟಿಷ್ ಹೆಸರು ಬದಲು ಮಾಡಿ

ಬೆಳಗಾವಿ ಸೇರಿದಂತೆ ರಾಜ್ಯದ 12 ನಗರಗಳ ಹೆಸರನ್ನು ಕನ್ನಡೀಕರಿಸಿದ ಹಾಗೆ ...

Rashmi Kasaragodu
Updated On : 22 Oct 2014, 11:49 am

ಬೆಂಗಳೂರು: ಬೆಳಗಾವಿ ಸೇರಿದಂತೆ ರಾಜ್ಯದ 12 ನಗರಗಳ ಹೆಸರನ್ನು ಕನ್ನಡೀಕರಿಸಿದ ಹಾಗೆ ಬೆಂಗಳೂರು ನಗರದ ವಿವಿಧ ರಸ್ತೆಗಳಿಗೆ ಇಟ್ಟಿರುವ ಬ್ರಿಟಿಷ್ ಅಧಿಕಾರಿಗಳ ಹೆಸರನ್ನು ಬದಲಾಯಿಸಬೇಕು. ನಾಡಿನ ಶ್ರೇಷ್ಠ ವ್ಯಕ್ತಿಗಳ ಹೆಸರನ್ನು ಅಲ್ಲಿಗೆ  ನಾಮಕರಣ ಮಾಡಬೇಕು ಎಂದು ಕನ್ನಡ ಚಳವಳಿ  ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಒತ್ತಾಯಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕನ್ನಡಿಗರೇ ಇಲ್ಲ. ಕನ್ನಡ ಭಾಷೆ ಎನ್ನುವುದು ಮಾಯವಾಗುತ್ತಿದೆ. ಅನ್ಯಭಾಷಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿವಿಧ ರಸ್ತೆ, ಪಾರ್ಕ್‌ ಹಾಗೂ ಆಸ್ಪತ್ರೆಗಳಿಗೆ  ಇಟ್ಟಿರುವ ಬ್ರಿಟಿಷ್ ಅಧಿಕಾರಿಗಳ ಹೆಸರನ್ನು ಬದಲಾಯಿಸಬೇಕು. ಕಬ್ಬನ್ ಪಾರ್ಕ್‌ನಲ್ಲಿರುವ ಕಬ್ಬನ್ ಪ್ರತಿಮೆಯನ್ನು ತೆಗೆದುಹಾಕಬೇಕು ಎಂದು ಆಗ್ರಹಿಸಿದರು.

ಕನ್ನಡದ ಚಲನಚಿತ್ರೋದ್ಯಮದ ಹೆಸರಲ್ಲಿ ಸ್ಥಾಪನೆಯಾಗಿರುವ ಚಲನಚಿತ್ರ ವಾಣಿಜ್ಯ ಮಂಡಳಿ ಸರ್ವಭಾಷಾ ಚಿತ್ರಗಳ ವಾಣಿಜ್ಯ ಮಂಡಳಿಯಾಗಿದೆ. ಇಲ್ಲಿ ಕನ್ನಡಕ್ಕೆ ಆದ್ಯತೆಯೇ ಇಲ್ಲ. ಕನ್ನಡದ ಹೆಸರಲ್ಲಿ ಅನ್ಯ ಭಾಷೆಯ ಚಿತ್ರಗಳ ಸಂಖ್ಯೆ ಹೆಚ್ಚಾಗಿದೆ. ನೂರೆಂಟು ಚಿತ್ರಮಂದಿರಗಳು ಇದಕ್ಕೆ ಸಾಥ್ ನೀಡಿವೆ. ಮುಂದಿನ ದಿನಗಳಲ್ಲಿ ಇಂತಹ ಚಿತ್ರಮಂದಿರಗಳಿಗೆ ನುಗ್ಗಿ ಬೆಂಕಿ ಹಾಕುವ ಚಳವಳಿ ಶುರು ಮಾಡಲಾಗುವುದು ಎಂದು ಎಚ್ಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement