ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಬೇಡಿಕೆ ಈಡೇರಿಸದಿದ್ರೆ ಸಾಮೂಹಿಕ ರಾಜಿನಾಮೆ: ಸರ್ಕಾರಿ ವೈದ್ಯರಿಂದ ಎಚ್ಚರಿಕೆ

ಸಾಂದರ್ಭಿಕ ಚಿತ್ರ
Vishwanath S
Updated On : 23 Oct 2014, 3:59 am

ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿರುವ ಸರ್ಕಾರಿ ವೈದ್ಯರು ತಮ್ಮ ಬೇಡಿಕೆಗಳನ್ನು ಈಡೇರಿಸದೆ ಇದ್ದರೆ ಸಾಮೂಹಿಕ ರಾಜಿನಾಮೆ ನೀಡುವುದಾಗಿ ಗುರುವಾರ ಬೆದರಿಕೆಯಾಕಿದ್ದಾರೆ.

ಪ್ರತಿ ತಿಂಗಳು ನಿಗದಿತ ಸಮಯಕ್ಕೆ ಸಂಬಳವನ್ನು ನೀಡುವಂತೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿರುವ ವೈದ್ಯರು ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸದೇ ಇದ್ದರೆ ಅಕ್ಟೋಬರ್ 27 ರಂದು ರಾಜ್ಯದಲ್ಲಿರುವ ಸುಮಾರು 3,400 ಸರ್ಕಾರಿ ವೈದ್ಯರು ಸಾಮೂಹಿಕ ರಾಜಿನಾಮೆ ನೀಡುವುದಾಗಿ ಸರ್ಕಾರಿ ವೈದ್ಯರ ಸಂಘದ ಅಧ್ಯಕ್ಷ ವೀರಭದ್ರಯ್ಯ ಅವರು ಹೇಳಿದ್ದಾರೆ.

ರಾಜಿನಾಮೆ ನಂತರವೂ ಒಂದು ತಿಂಗಳ ಕಾಲಾ ಕಾರ್ಯ ನಿರ್ವಹಿಸುತ್ತೇವೆ. ಆ ಒಂದು ತಿಂಗಳೊಳಗೆ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಇಲ್ಲದಿದ್ದರೆ ತಮ್ಮ ರಾಜಿನಾಮೆಯನ್ನು ಅಂಗೀಕರಿಸುವಂತೆ ಹೇಳಲಾಗುವುದು ಎಂದರು.

ಈ ಹಿಂದೆ ಮಾತನಾಡಿದ್ದ ವೀರಭದ್ರಯ್ಯ ಅವರು, ಸುಮಾರು ನಾಲ್ಕು ತಿಂಗಳಿನಿಂದ ವೈದ್ಯರಿಗೆ ಸಂಬಳ ನೀಡುತ್ತಿಲ್ಲ. ಸಂಬಳ ರಹಿತ ಉದ್ಯೋಗವನ್ನು ವೈದ್ಯರು ಮಾಡುತ್ತಿದ್ದಾರೆ. ಹೀಗೆ ಎಷ್ಟೇ ದಿನಗಳ ಕಾಲ ಸಂಬಳ ರಹಿತ ಸೇವೆಗಳನ್ನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement