ರಂಗ ಶಂಕರಕ್ಕೆ ೧೦ ವರ್ಷ: ಅಕ್ಟೋಬರ್ ೨೮ ರಿಂದ ನಾಟಕೋತ್ಸವ
ಈ ವರ್ಷದ ರಂಗಶಂಕರದ ನಾಟಕೋತ್ಸವ ಅಕ್ಟೋಬರ್ ೨೮ರಿಂದ ನವೆಂಬರ್ ೯ರವರೆಗೆ ಜರುಗಲಿದೆ.
ಬೆಂಗಳೂರು: ಈ ವರ್ಷದ ರಂಗಶಂಕರದ ನಾಟಕೋತ್ಸವ ಅಕ್ಟೋಬರ್ ೨೮ರಿಂದ ನವೆಂಬರ್ ೯ರವರೆಗೆ ಜರುಗಲಿದೆ. ರಂಗಶಂಕರಕ್ಕೆ ಹತ್ತು ವರ್ಷ ತುಂಬಿದ ಹೊತ್ತಿನಲ್ಲಿ ನಡೆಯುತ್ತಿರುವ ಈ ನಾಟಕೋತ್ಸವಕ್ಕೆ ವಿಶಿಷ್ಟ ಮೆರಗು ಬಂದಿದೆ.
ಈ ನಾಟಕೋತ್ಸವದಲ್ಲಿ ೯ ಭಾಷೆಗಳ ೧೩ ನಾಟಕಗಳ, ೨೦ ಪ್ರದರ್ಶನಗಳು ನಡೆಯಲಿವೆ. ಅಲ್ಲದೆ ಇದೇ ಸಮಯದಲ್ಲಿ ವಾರ್ಷಿಕ 'ಕಲಾ ವಿಮರ್ಶೆ' ಕೋರ್ಸ್ ಕೂಡ ನಡೆಯಲಿದೆ.
ಇಸ್ಮತ್ ಚುಕ್ತಾಯಿ ಅವರ ನಾಸಿರುದ್ದೀನ್ ಷಾ ಅಭಿನಯದ 'ಇಸ್ಮತ್ ಆಪ್ ಕೆ ನಾಮ್' ಎನ್ನುವ ನಾಟಕದೊಂದಿಗೆ ನವೆಂಬರ್ ೯ ರಂದು ಮುಕ್ತಾಯಗೊಳ್ಳುವ ನಾಟಕೋತ್ಸವ, ಅಂದು ನಡೆಯುವ ಎಲ್ಲ ಕಾರ್ಯಕ್ರಮಗಳನ್ನು ಶಂಕರ್ ನಾಗ್ ಅವರಿಗೆ ಅರ್ಪಿಸಲಾಗಿದೆ. ನವೆಂಬರ್ ೯ ಶಂಕರ್ ನಾಗ್ ಹುಟ್ಟಿದ ದಿನ.