ನರ್ಸರಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ; ಕ್ರಮ ಕೈಗೊಳ್ಳಲು ಸಿಎಂ ಆದೇಶ
ಇಲ್ಲಿನ ಶಾಲೆಯೊಂದರಲ್ಲಿ 3 ವಯಸ್ಸಿನ ನರ್ಸರಿ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಬಗ್ಗೆ ಮುಖ್ಯಮಂತ್ರಿ...
ಬೆಂಗಳೂರು: ಇಲ್ಲಿನ ಶಾಲೆಯೊಂದರಲ್ಲಿ 3 ವಯಸ್ಸಿನ ನರ್ಸರಿ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಗುರುವಾರ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಪ್ರಸ್ತುತ ಪ್ರಕರಣದ ಬಗ್ಗೆ ತನಿಖೆಗಳು ನಡೆದುಬರುತ್ತಿದ್ದು, ಆ ಶಾಲೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾನು ಪೊಲೀಸರಿಗೆ ಆದೇಶಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.
ಪ್ರಕರಣ ನಡೆದಿರುವ ಶಾಲೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದ್ದು, ಶಾಲೆಯ ಅಟೆಂಡರ್‌ನ್ನು ಬಂಧಿಸಿ, ವಿಚಾರಣೆಗೊಳಪಡಿಸಲಾಗಿದೆ.
ಅದೇ ವೇಳೆ ಈ ಶಾಲೆಯಲ್ಲಿ ಮಿತಿಗಿಂತ ಹೆಚ್ಚು ತಗರತಿಗಳನ್ನು ನಡೆಸಲಾಗುತ್ತಿದೆ ಎಂಬ ಆರೋಪವಿದೆ. ಬಲ್ಲಮೂಲಗಳ ಪ್ರಕಾರ 1 ರಿಂದ 6ನೇ ತರಗತಿಯ ವರೆಗೆ ಮಾತ್ರ ತರಗತಿ ನಡೆಸಲು ಅನುಮತಿ ಇದೆ. ಆದರೆ ಈ ಶಾಲೆ ಅಕ್ರಮವಾಗಿ 3ನೇ ತರಗತಿ ನಡೆಸುತ್ತಿದೆ ಎಂಬ ಆರೋಪವೆದ್ದಿದೆ.
ಮಾತ್ರವಲ್ಲದೆ ತಮ್ಮ ಮಗುವಿನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಬಾಲಕಿಯ ಅಪ್ಪ ದೂರಿದ್ದಾರೆ. ತಾನು ಮಗಳನ್ನು ಕರೆತರಲು ಹೋದಾಗ ಆಕೆ ಅಳುತ್ತಿದ್ದಳು. ನಂತರ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂಬ ಸತ್ಯ ಗೊತ್ತಾಯಿತು ಎಂದು ದೌರ್ಜನ್ಯಕ್ಕೊಳಗಾದ ಬಾಲಕಿಯ ಅಮ್ಮ ದೂರಿನಲ್ಲಿ ಹೇಳಿದ್ದಾರೆ.
ಶಾಲೆಯಲ್ಲಿ ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದ ವಿರುದ್ಧ ತಮ್ಮ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಭರವಸೆ ನೀಡಿದ್ದಾರೆ.