ರೌಡಿಶೀಟರ್ ರಾಹಿಲ್ ಕೊಲೆ
ಕ್ಷುಲಕ ಕಾರಣಕ್ಕೆ ರೌಡಿಶೀಟರ್ ರಾಹಿಲ್ ತನ್ನ ಸ್ನೇಹಿತನಿಂದಲೇ ಬರ್ಬರವಾಗಿ ಕೊಲೆಗಿಡಾಗಿದ್ದಾನೆ.
ಬೆಂಗಳೂರು: ಕ್ಷುಲಕ ಕಾರಣಕ್ಕೆ ರೌಡಿಶೀಟರ್ ರಾಹಿಲ್ ತನ್ನ ಸ್ನೇಹಿತನಿಂದಲೇ ಬರ್ಬರವಾಗಿ ಕೊಲೆಯಾಗಿದ್ದಾನೆ.
ಕೆ.ಜಿ ಹಳ್ಳಿ ಠಾಣಾ ವ್ಯಾಪ್ತಿಯ ರೌಡಿಶೀಟರ್ ಆಗಿದ್ದ 26 ವರ್ಷದ ರಾಹಿಲ್ ಕೆಜಿ ಹಳ್ಳಿಯ ವಿನೋಭನಗರದರ ತನ್ನ ಸ್ನೇಹಿತ ವಾಹಿದ್ ಮನೆಯಲ್ಲಿ ಕಳೆದ ರಾತ್ರಿ 3 ಗಂಟೆಯ ಸುಮಾರಿನಲ್ಲಿ ಬರ್ಬರವಾಗಿ ಕೊಲೆಯಾಗಿದ್ದಾನೆ.
ನಿನ್ನೆ ಸಂಜೆ ರಾಹಿಲ್ ವಿನೋಭನಗರದರಲ್ಲಿರುವ ವಾಹಿದ್‌ನ ಮನೆಗೆ ಹೋಗಿದ್ದ ಇಬ್ಬರು ಸೇರಿ ಮಧ್ಯರಾತ್ರಿ 2 ಗಂಟೆಯವರೆಗೂ ಕಂಟ ಪೂರ್ತಿಯಾಗಿ ಕುಡಿದಿದ್ದಾರೆ. ನಂತರ ಕ್ಷುಲಕ್ಕ ಕಾರಣಕ್ಕೆ ಇಬ್ಬರ ಮಧ್ಯೆ ಜಗಳ ಶುರುವಾಗಿದ್ದು, ವಾಹಿದ್ ತನ್ನ ಮನೆಯಲ್ಲಿದ್ದ ಚಾಕುವಿನಿಂದ ಇರಿದು ರಾಹಿಲ್‌ನನ್ನು ಹತ್ಯೆ ಮಾಡಿದ್ದಾನೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹಿದ್‌ನನ್ನು ವಶಕ್ಕೆ ಪಡೆದಿರುವ ಕೆಜಿ ಹಳ್ಳಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ರಾಹಿಲ್ ಹಿನ್ನೆಲೆ
ಕೆ.ಜಿ ಹಳ್ಳಿಯ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಆಗಿದ್ದ ರಾಹಿಲ್‌ನ ಮೇಲೆ ಸುಮಾರು 24 ಪ್ರಕರಣಗಳು ದಾಖಲಾಗಿವೆ. ಕೊಲೆ, ಕೊಲೆ ಯತ್ನ, ಸುಲಿಗೆ, ದರೋಡೆ ಸೇರಿದಂತೆ ಸುಮಾರು 24 ಕೇಸ್‌ಗಳಲ್ಲಿ ರಾಹಿಲ್ ಆರೋಪಿಯಾಗಿದ್ದ.
ಸುಲಿಗೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 2011ರ ನ.25ರಂದು ಬಾಣಸವಾಡಿ ಪೊಲೀಸ್ ಠಾಣೆಯ ಅಂದಿನ ಇನ್ಸ್‌ಪೆಕ್ಟರ್ ಆಗಿದ್ದ ರಂಗಪ್ಪ ಎಂಬುವರು ರಾಹಿಲ್ ಮೇಲೆ ಎರಡು ಸುತ್ತಿನ ಗುಂಡಿನ ದಾಳಿ ನಡೆಸಿದ್ದರು. ಗುಂಡಿನ ದಾಳಿಯಲ್ಲಿ ರಾಹಿಲ್‌ನ ಕಾಲಿಗೆ ಗಾಯವಾಗಿತ್ತು. ಕೆಲಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿದ್ದ ರಾಹಿಲ್ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಹೊರ ಬಂದಿದ್ದ ಎನ್ನಲಾಗಿದೆ.