ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ರಾಘವೇಶ್ವರ ಶ್ರೀಗಳ ಪರ ಹೇಳಿಕೆ ನೀಡದಂತೆ ಧರ್ಮಕರ್ತರಿಗೆ ಬೆದರಿಕೆ

ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿಗಳ ಪರವಾಗಿ ಸುದ್ದಿವಾಹಿನಿಗಳಿಗೆ ಹೇಳಿಕೆ ನೀಡದಂತೆ ಹೊರನಾಡು...

Rashmi Kasaragodu
Updated On : 25 Oct 2014, 10:37 am

ಬೆಂಗಳೂರು: ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿಗಳ ಪರವಾಗಿ ಸುದ್ದಿವಾಹಿನಿಗಳಿಗೆ ಹೇಳಿಕೆ ನೀಡದಂತೆ ಹೊರನಾಡು ಕ್ಷೇತ್ರದ ಧರ್ಮಕರ್ತರಾದ ಭೀಮೇಶ್ವರ ಜೋಶಿ ಅವರಿಗೆ ಬೆದರಿಕೆ ಹಾಕಲಾಗಿದೆ. ಮಹಿಳಾ ಆಯೋಗದ ಹೆಸರು ಹೇಳಿಕೊಂಡು ಅನಾಮಧೇಯ ಮಹಿಳೆಯೊಬ್ಬರು ಈ ಬೆದರಿಕೆ ಹಾಕಿದ್ದಾರೆ. ಶುಕ್ರವಾರ ಬೆಳಗ್ಗೆ ಕ್ಷೇತ್ರದ ದೂರವಾಣಿಗೆ ಕರೆ ಮಾಡಿದ ಅನಾಮಧೇಯ ಮಹಿಳೆ, 'ಜೋಯಿಸರು (ಜೋಶಿ) ಇದ್ದಾರಾ? ಅವರಿಗೆ ರಾಘವೇಶ್ವರ ಸ್ವಾಮೀಜಿಗಳ ಪರವಾಗಿ ಟೀವಿಗಳಿಗೆ ಹೇಳಿಕೆ ನೀಡುವುದನ್ನು ಸಿಲ್ಲಿಸುವಂತೆ ಹೇಳಿ. ಇಲ್ಲದಿದ್ದರೆ ಪರಿಣಾಮ ನೆಟ್ಟಗಿರದು ಎಂದು ಎಚ್ಚರಿಸಿದ್ದಾರೆ. ಈ ರೀತಿ ಬೆದರಿಕೆ ಹಾಕಿದ ಮಹಿಳೆ ತಮ್ಮ ಹೆಸರು ಹೇಳಿಲ್ಲ. ಆದರೆ , ತಾವು ಮಹಿಳಾ ಆಯೋಗದವರು ಎಂದಷ್ಟೇ ಹೇಳಿ ಕರೆ ಕಟ್ ಮಾಡಿದ್ದಾರೆ ಎಂದು ಕ್ಷೇತ್ರದ ಎಚ್.ಆರ್. ಸತೀಶ್ ತಿಳಿಸಿದ್ದಾರೆ. ಆ ಸಂಬಂಧ ಜೋಶಿ ಅವರ ಪರವಾಗಿ ಕಳಸ ಠಾಣೆಯಲ್ಲಿ ಸತೀಶ್ ಅವರು ದೂರು ದಾಖಲಿಸಿದ್ದಾರೆ. ಜತೆಗೆ, ಜೋಶಿ ಅವರಿಗೆ ರಕ್ಷಣೆ  ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement