ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಶಬ್ದ ಮಾಲಿನ್ಯ ಶೆ.5.8ರಷ್ಟು ದೀಪಾವಳಿ ದಿನ ಏರಿಕೆ

ಸಾಮಾನ್ಯ ದಿನಕ್ಕೆ ಹೋಲಿಸಿದರೆ ದೀಪಾವಳಿ ಹಬ್ಬದ ದಿನದಂದು ಶಬ್ದ ಮಾಲಿನ್ಯ ನಗರದಲ್ಲಿ ಶೇ.5.8ರಷ್ಟು...

Mainashree
Updated On : 26 Oct 2014, 1:00 am

ಕನ್ನಡಪ್ರಭ ವಾರ್ತೆ, ಬೆಂಗಳೂರು, ಅ.25: ಸಾಮಾನ್ಯ ದಿನಕ್ಕೆ ಹೋಲಿಸಿದರೆ ದೀಪಾವಳಿ ಹಬ್ಬದ ದಿನದಂದು ಶಬ್ದ ಮಾಲಿನ್ಯ ನಗರದಲ್ಲಿ ಶೇ.5.8ರಷ್ಟು ಏರಿಕೆಯಾಗಿದೆ ಎಂದು ರಾಜ್ಯ ಪರಿಸರ ಮಾಲಿನ್ಯ ಮಂಡಳಿ ಮಾಹಿತಿ ನೀಡಿದೆ.

ನಗರದ 10 ಜಾಗಗಳಲ್ಲಿ ಶಬ್ದ ಮೇಲ್ವಿಚಾರಕ ಯಂತ್ರ ಅಳವಡಿಸಿ ಮಾಲಿನ್ಯದಲ್ಲಾದ ಏರಿಳಿತಗಳ ಮಾಹಿತಿಯನ್ನು ಮಂಡಳಿ ಒದಗಿಸಿದೆ. ನಗರದ ಕೆಲವು ಭಾಗಗಳಲ್ಲಿ ಶಬ್ದ ಮಾಲಿನ್ಯ ಪ್ರಮಾಣದಲ್ಲಿನ ಶೇಕಡವಾರು ಗಮನಿಸಿದಾಗ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಶೇ.0.6ರಿಂದ ಶೇ.19.2ರಷ್ಟು ಏರಿಕೆಯಾಗಿದ್ದು ಒಟ್ಟಾರೆ ಶೇ.5.8ರಷ್ಟು ಏರಿಕೆ ಕಂಡಿದೆ.

ಸ್ಥಳ ಮತ್ತು ಶಬ್ದ ಮಾಲಿನ್ಯದಲ್ಲಿನ ಏರಿಕೆ ಪ್ರಮಾಣ: ಹಬ್ಬದ ದಿನಗಳಾದ ಅ.22 ರಿಂದ ಅ.24ರ ವರೆಗೆ ಶೇಕಡವಾರು ಶಬ್ದ ಮಾಲಿನ್ಯ ಏರಿಕೆ ಕಂಡ ಪ್ರದೇಶಗಳು: ವೈಟ್ ಫೀಲ್ಡ್-ಶೇ.0.6, ಪೀಣ್ಯ-ಶೇ.1.5, ಪರಿಸರ ಭವನ, ಚರ್ಚ್ ಸ್ಟ್ರೀಟ್- ಶೇ.1.5, ಯಶಳಂತಪುರ ಶೇ.1.7, ಮಾರತಹಳ್ಳಿ-ಶೇ.4.9, ಬಸವೇಶ್ವರ ನಗರ-ಶೇ.16.8, ಬಿಟಿಎಂ ಬಡಾವಣೆ-ಶೇ.4.7, ದೊಮ್ಮಲೂರು-ಸೇ.7.5, ಆರ್.ವಿ ಎಂಜಿನಿಯರಿಂಗ್ ಕಾಲಜು, ಮೈಸೂರು ರಸ್ತೆ-ಶೇ.0.9, ನಿಮ್ಹಾನ್ಸ್- ಶೇ.18.2.

ಕೆಲವು ಸೂಕ್ಷ್ಮ ಪ್ರದೇಶಗಳಾದ ನಿಮ್ಹಾನ್ಸ್, ಆರ್.ವಿ.ಕಾಲೇಜು, ಮೈಸೂರು ರಸ್ತೆ ಹಾಗೂ ಯಶವಂತಪುರ, ಮಾರತ್‌ಹಳ್ಳಿ, ಬಿಟಿಎಂ ಬಡಾವಣೆಗಳು ಸದಾ ಟ್ರಾಫಿಕ್‌ನಿಂದ ಕೂಡಿದ್ದು ಶಬ್ದ ಮಾಲಿನ್ಯದಲ್ಲಿನ ಏರಿಕೆಯಲ್ಲಿ ಟ್ರಾಫಿಕ್‌ನ ಕೊಡುಗೆಯೂ ಇರುವುದಾಗಿ ಮಂಡಳಿ ತಿಳಿಸಿದೆ.

ಹಬ್ಬದ ಮೊದಲ ದಿನವಾದ ಅ.22ರಂದು ಪೀಣ್ಯ, ಚರ್ಚ್ ಸ್ಟ್ರೀಟ್ ಮತ್ತು ಆರ್.ವಿ ಎಂಜಿನಿಯರಿಂಗ್ ಕಾಲೇಜು ಬಳಿ ಮಾತರ್ ಸಾಮಾನ್ಯ ದಿನಕ್ಕೆ ಹೋಲಿಸಿದಾಗ ಶೇ.0.17ರಿಂದ ಶೇ.8ರಷ್ಟು ಶಬ್ದದ ಪ್ರಮಾಣ ಇಳಿಕೆಯಾಗಿದೆ. ಇದೇ ಪ್ರದೇಶಗಳಲ್ಲಿ ಅ.24ರಂದು ಶೇ.0.3ರಿಂದ ಶೇ.1.36ರಷ್ಟು ಇಳಿಕೆಯಾಗಿದೆ.

ಸೂಕ್ಷ್ಮ ಪ್ರದೇಶವಾದ ನಿಮ್ಹಾನ್ಸ್ ಬಳಿ ಹಬ್ಬದ ಮೊದಲ ದಿನದಂದು ಸಾಮಾನ್ಯ ದಿನಕ್ಕೆ ಹೋಲಿಸಿದಾಗ ಶೇ.23.9ರಷ್ಟು ಶಬ್ದದ ಪ್ರಮಾಣ ಏರಿಕೆಯಾದರೆ ಅ.24ರಂದು ಶೇ.13.7ರಷ್ಟು ಏರಿಕೆಯಾಗಿದೆ.

ಒಟ್ಟಾರೆಯಾಗಿ ಈ ಅಂಕಿ ಅಂಶ ಗಮನಿಸಿದಾಗ ಪಟಾಕಿ ಹಚ್ಚುವವರ ಸಂಖ್ಯೆ ಕೂಡ ಇಳಿಕೆಯಾಗಿದೆ. ಅಲ್ಲದೇ ಅ.22 ಹಾಗೂ 23ರಂದು ನಗರದಲ್ಲಿ ಸುರಿದ ಮಳೆಯಿಂದ ಪಟಾಕಿ ಶಬ್ಧ ಅಷ್ಟಾಗಿ ಮಾರ್ದನಿಸಿಲ್ಲ ಎನ್ನಬಹುದು. ಅಲ್ಲದೇ ಪರಿಸರ ಸ್ನೇಹಿ ಪಟಾಕಿ ಬಳಸುವಂತೆ ಮಂಡಳಿ ಜಾಗೃತಿ ಕಾರ್ಯಕ್ರಮ ನಡೆಸಿದ್ದು ಫಲಕಾರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement