ಕೊತ್ತಂಬರಿ ಸೊಪ್ಪಿನ ಬೆಲೆ ಗಗನಕ್ಕೆ: ರುಚಿಗೆಟ್ಟ ಚಟ್ನಿ
ಬೆಂಗಳೂರಿನಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ, ಪೂರೈಕೆಯ ವ್ಯತ್ಯಯದಿಂದ ಕೊತ್ತಂಬರಿ ಸೊಪ್ಪಿನ ಬೆಲೆ...
ಬೆಂಗಳೂರು: ಬೆಂಗಳೂರಿನಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ, ಪೂರೈಕೆಯ ವ್ಯತ್ಯಯದಿಂದ ಕೊತ್ತಂಬರಿ ಸೊಪ್ಪಿನ ಬೆಲೆ ಒಂದು ಕಟ್ಟಿಗೆ ೧೧೦ ರುಪಾಯಿಗೆ ಏರಿದೆ!
ಸರ್ಕಾರಿ ಸಹಯೋಗದಲ್ಲಿ ನಡೆಯುವ ತರಕಾರಿ ಮಾರುಕಟ್ಟೆ ಹಾಪ್ ಕಾಮ್ಸ್ ಶನಿವಾರ ಈ ಬೆಲೆಯನ್ನು ತನ್ನ ಅಂತರ್ಜಾಲ ತಾಣದಲ್ಲಿ ಹಾಕಿದೆ. ಸಾಮಾನ್ಯವಾಗಿ ಬೆಂಗಳೂರಿನ ಇತರ ಅಂಗಡಿಗಳಿಗೆ ಹೋಲಿಸಿದರೆ ಹಾಪ್ ಕಾಮ್ಸ್ ನಲ್ಲಿ ತರಕಾರಿ ಬೆಲೆಗಳು ಕಡಿಮೆ. "ಇಂದು ಹಾಪ್ ಕಾಮ್ಸ್ ನವರು ಕೊತ್ತಂಬರಿ ಸೊಪ್ಪಿನ ಬೆಲೆ ತಿಳಿಸಿದಾಗ ನನಗೆ ಶಾಕ್ ಆಯಿತು" ಎನ್ನುತ್ತಾರೆ ವೃತ್ತಿಪರ ನೌಕರಿಯಲ್ಲಿ ಕೆಲಸ ಮಾಡುತ್ತಿರುವ ಸವಿತಾ.
ಮಲ್ಲೇಶ್ವರಂನಲ್ಲಿ ಕೊತ್ತಂಬರಿ ಸೊಪ್ಪಿನ ಬೆಲೆ ಒಂದು ಕಟ್ಟಿಗೆ ೬೦ ರುಪಾಯಿಗೆ ಏರಿದೆ. "ಮಳೆಯಿಂದಾಗ ಕೊತ್ತಂಬರಿ ಸೊಪ್ಪಿನ ಪೂರೈಕೆ ಆಗಿಲ್ಲ" ಎನ್ನುತ್ತಾರೆ ಮಲ್ಲೇಶ್ವರಂ ಮಾರ್ಕೆಟ್ ನ ತರಕಾರಿ ಮಾರಾಟಗಾರ್ತಿ ಲಕ್ಷ್ಮೀದೇವಿ.
ಕರಿಬೇವಿನ ಬೆಲೆ ಕೂಡ ಹೆಚ್ಚಿದೆ. "ಕೆಲವು ದಿನಗಳ ಹಿಂದೆ ಎರಡರಿಂದ ಮೂರು ಕಡ್ಡಿ ಕರಿಬೇವಿಗೆ ೧೦ ರುಪಾಯಿತ್ತು ಈಗ ೨೦ ರುಪಾಯಿ." ಎನ್ನುತ್ತಾರೆ ಮನೆಯೊಡತಿ ಸುನೀತಾ.
ತರಕಾರಿಗಳ ಬೆಲೆಯೂ ಹೆಚ್ಚಿದ್ದು, ದರ್ಶಿನಿಗಳು ತಮ್ಮ ಲಾಭಾಂಶವನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. "ಕೊತ್ತಂಬರಿ ಸೊಪ್ಪು ಚಟ್ನಿಗೆ ಬಹಳ ಅಗತ್ಯವಾದ ವಸ್ತು. ಈ ಗಗನಕ್ಕೇರಿದ ಬೆಲೆಯಲ್ಲಿ ಅದನ್ನು ಅತಿ ಕಡಿಮೆಯಾಗಿ ಬಳಸುತ್ತೇವೆ, ಅನ್ಯ ಮಾರ್ಗವಿಲ್ಲ" ಎನ್ನುತ್ತಾರೆ ಹೋಟೆಲ್ ಸಂಘದ ಕಾರ್ಯದರ್ಶಿ ಎಂ ರಾಮಮೂರ್ತಿ.