137 ಪಟಾಕಿ ದುರಂತಕ್ಕೆ ಗಾಯಗೊಂಡವರು
ದೀಪಾವಳಿ ಹಿನ್ನೆಲೆಯಲ್ಲಿ, ಪಟಾಕಿಯಿಂದ ಕಣ್ಣಿಗೆ ಹಾನಿ ಮಾಡಿಕೊಂಡವರ ಸಂಖ್ಯೆ...
ಬೆಂಗಳೂರು: ದೀಪಾವಳಿ ಹಿನ್ನೆಲೆಯಲ್ಲಿ, ಪಟಾಕಿಯಿಂದ ಕಣ್ಣಿಗೆ ಹಾನಿ ಮಾಡಿಕೊಂಡವರ ಸಂಖ್ಯೆ ಶನಿವಾರ 137ಕ್ಕೆ ಏರಿದೆ.
ಮಿಂಟೋ ಆಸ್ಪತ್ರೆಯಲ್ಲಿ 35, ನಾರಾಯಣ ನೇತ್ರಾಲಯದಲ್ಲಿ 38, ರಂಗಲಕ್ಷ್ಮೀ ನೇತ್ರಾಲಯದಲ್ಲಿ 4, ನೇತ್ರಧಾಮ ಸೂಪರ್ ಸ್ಪೆಷಾಲಿಟೆ ಕಣ್ಣಾಸ್ಪತ್ರೆಯಲ್ಲಿ 6, ಶಂಕರ ಆಸ್ಪತ್ರೆಯಲ್ಲಿ 13, ಬೆಂಗಳೂರು ನೇತ್ರಾಲಯದಲ್ಲಿ 4, ಶೇಖರ್ ಆಸ್ಪತ್ರೆಯಲ್ಲಿ 12, ವಾಸನ್ ಐ ಕೇರ್ನಲ್ಲಿ 18, ಮೋದಿ ಕಣ್ಣಿನ ಆಸ್ಪತ್ರೆಯಲ್ಲಿ 6, ಸಂಪ್ರತಿ ಕಣ್ಣಿನ ಆಸ್ಪತ್ರೆಯಲ್ಲಿ 1 ಪ್ರಕರಣ ವರದಿಯಾಗಿವೆ.
ಈ ಬಗ್ಗೆ ವಿವರ ನೀಡಿರುವ ವೈದ್ಯರು, ಗಾಯಗೊಂಡಿರುವ 10ಕ್ಕೂ ಹೆಚ್ಚಿನ ಜನರಲ್ಲಿ ಕಣ್ಣಿನ ಪ್ರಮುಖ ಭಾಗವಾದ ಕಾರ್ನಿಯಾಕ್ಕೆ ಗಂಭೀರ ಗಾಯಗಳಾಗಿರುವುದರಿಂದ ಶಸ್ತ್ರಚಿಕಿತ್ಸೆ ನಡೆಸಬೇಕಿದೆ. ಅಪರೇಷನ್ ನಡೆಸಿದರೂ ದೃಷ್ಟಿ ಬರುವ ಸಾಮರ್ಥ್ಯ ಕ್ಷೀಣ ಎಂದಿದ್ದಾರೆ. ನಾರಾಯಣ ನೇತ್ರಾಲಯದಲ್ಲಿ 38 ಮಂದಿಗೆ ಚಿಕಿತ್ಸೆ ನೀಡಲಾಗಿದ್ದು ಈ ಪೈಕಿ 20 ಮಕ್ಕಳು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ಒಂದು ವರ್ಷದ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಅಲ್ಲಿನ ವೈದ್ಯರು ಮಾಹಿತಿ ನೀಡಿದ್ದಾರೆ.