ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ನವೆಂಬರ್ ೧ಕ್ಕೆ ಬೆಂಗಳೂರಿನಿಂದ ಹೊಸ ರೈಲುಗಳ ಚಾಲನೆ

ಬಜೆಟ್ ನಲ್ಲಿ ಘೋಷಿಸಲಾಗಿದ್ದ ಬೆಂಗಳೂರು-ಚಾಮರಾಜನಗರ, ಬೆಂಗಳೂರು-ತುಮಕೂರು, ಬೆಂಗಳೂರು-ಹುಬ್ಬಳ್ಳಿ,...

Updated On : 26 Oct 2014, 1:54 am

ಬೆಂಗಳೂರು: ಬಜೆಟ್ ನಲ್ಲಿ ಘೋಷಿಸಲಾಗಿದ್ದ ಬೆಂಗಳೂರು-ಚಾಮರಾಜನಗರ, ಬೆಂಗಳೂರು-ತುಮಕೂರು, ಬೆಂಗಳೂರು-ಹುಬ್ಬಳ್ಳಿ, ಬೆಂಗಳೂರು-ಯಶವಂತಪುರ-ಹೊಸೂರು ಮಾರ್ಗದ ರೈಲುಗಳಿಗೆ ನವೆಂಬರ್ ೧ಕ್ಕೆ ಚಾಲನೆ ಸಿಗಲಿದ್ದು ಇದು ಕನ್ನಡಿಗರಿಗೆ ರಾಜ್ಯೋತ್ಸವದ ಕೊಡುಗೆಯಾಗಿದೆ. ಉಳಿದ ರೈಲು ಸೇವೆಗಳು ಡಿಸೆಂಬರ್ ನಲ್ಲಿ ಪ್ರಾಂಭವಾಗಲಿವೆ ಎಂದು ಕೆಂದ್ರ ರೈಲ್ವೆ ಸಚಿವ ಡಿ ವಿ ಸದಾನಂದ ಗೌಡ ತಿಳಿಸಿದ್ದಾರೆ.

ಶನಿವಾರ ನೈಋತ್ಯ ರೈಲ್ವೆ ವಿಭಾಗ, ನಗರದ ರೈಲ್ವೆ ನಿಲ್ದಾಣದಲ್ಲಿ ಉಚಿತ ವೈ ಫೈ ಸೇವೆ ಮತ್ತು 'ಸುಖಮಂಗಳಂ ಯಾತ್ರಾ ಎಕ್ಸ್ಪ್ರೆಸ್' ಗೆ ಚಾಲನೆ ನೀಡಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಸದಾನಂದ ಗೌಡ ಪ್ರತಿದಿನ ೨.೩ಕೋಟಿ ಜನರು ರೈಲುಗಳಲ್ಲಿ ಸಂಚಾರ ಮಾಡುತ್ತಾರೆ ಎಂದರು.  "ರೈಲ್ವೆ ಬಜೆಟ್ ನಲ್ಲಿ ಮಂಡಿಸಿದ ಯೋಜನೆಗಳನ್ನು ಸರಿಯಾದ ಸಮಯಕ್ಕೆ ಅನುಷ್ಠಾನ ಮಾಡುವುದರಲ್ಲಿ ೮೦% ಗುರಿ ಮುಟ್ಟಿದ್ದೇವೆ. ಒಳ್ಳೆಯ ಸೇವೆ, ಸುರಕ್ಷತೆ ಮತ್ತು ಭದ್ರತೆಗಳ ಮೇಲೆ ನಾವು ಹೆಚ್ಚು ಗಮನ ಹರಿಸಿದ್ದೇವೆ ಹಾಗು ಈಗ ೧೭೦೦೦ ಪೋಲೀಸ್ ಕಾನ್ಸ್ಟೇಬಲ್ ಗಳ ಅವಶ್ಯಕತೆ ರೈಲ್ವೇಗೆ ಇದೆ. ೪೦೦೦ ಮಹಿಳಾ ಕಾನ್ಸ್ಟೇಬಲ್ ಗಳನ್ನು ಕೆಲಸಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ಆಗಲೆ ಪ್ರಾರಂಭವಾಗಿದೆ." ಎಂದರು ಸಚಿವರು.

ಸುಖಮಂಗಳಂ ಯಾತ್ರಾ ಎಕ್ಸ್ಪ್ರೆಸ್ ೧೧ಘಂಟೆಗೆ ಯಶವಂತಪುರದಿಂದ ಹೊರಡುವ ಈ ಪ್ರವಾಸಿ ರೈಲನ್ನು, ಗದಗ, ಗುಂಟ್ಕಲ್ ನಿಂದಲು ಏರಬಹುದಾಗಿದೆ. ಬಿಜಾಪುರದ ಸಿದ್ದೇಶ್ವರ ದೇವಸ್ಥಾನ, ಸೊಲ್ಲಾಪುರದ ಸ್ವಾಮಿ ಸಮರ್ಥ ದೇವಸ್ಥಾನ, ಪಂಡರಾಪುರದ ವಿಠ್ಠಲ-ರುಕ್ಮಿಣಿ ದೇವಸ್ಥಾನ, ಅಜಂತಾ-ಎಲ್ಲೋರಾ ಗುಹೆಗಳು, ಔರಂಗಾಬಾದ್ ನ ಜ್ಯೋತಿರ್ಲಿಂಗ, ಶಿರಡಿಯ ಶಿರಡಿ ಸಾಯಿ ದೇವಸ್ಥಾನ, ಬಾದಾಮಿ ಗುಹೆಗಳು ಮತ್ತು ದೇವಸ್ಥಾನಗಳು, ಹಂಪಿಯ ದೇವಸ್ಥಾನಗಳು - ಈ ತೀರ್ಥಕ್ಷೇತ್ರಗಳು ಈ ಪ್ರವಾಸದ ವ್ಯಾಪ್ತಿಗೆ ಬರುತ್ತವೆ. ಇದು ೯ ರಾತ್ರಿ ಮತ್ತು ೧೦ದಿನಗಳ ಪ್ರವಾಸ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement