ಪ್ರಶ್ನೆಪತ್ರಿಕೆ ಇ-ಮೇಲ್ ಗೆ ವಿ.ಟಿ.ಯು ೬.೮೪ ಕೋಟಿ ಖರ್ಚು: ಸಿ ಎ ಜಿ
ಪ್ರಶ್ನೆಪತ್ರಿಕೆ ಇ-ಮೇಲ್ ಗೆ ವಿ.ಟಿ.ಯು ೬.೮೪ ಕೋಟಿ ಖರ್ಚು: ಸಿ ಎ ಜಿ
ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಪ್ರಶ್ನೆಪತ್ರಿಕೆಗಳನ್ನು ಅಂತರ್ಜಾಲದಲ್ಲಿ ಕಳುಹಿಸಲು ಗುತ್ತಿಗೆದಾರರಿಗೆ ಪಾತಿಸಿರುವ ಮೊತ್ತ ೬.೮೪ ಕೋಟಿ. ಇದು ಸರ್ಕಾರಿ ಆಡಿಟರ್ ಗಳನ್ನು ಅಘಾತಗೊಳಿಸಿದೆ.
ಸಿ ಎ ಜಿ ಸಿದ್ಧಪಡಿಸಿರುವ ವರದಿಯ ಪ್ರಕಾರ, "ಅಂತರ್ಜಾಲದಲ್ಲಿ ಕಳುಹಿಸಿದ ಮಾದರಿ ಪ್ರಶ್ನೆಪತ್ರಿಕೆಗಷ್ಟೇ ದುಡ್ಡು ಪಾವತಿಸಬೇಕಿತ್ತು... ಒಂದು ಪ್ರಶ್ನೆಪತ್ರಿಕೆಗೆ ೧೯.೧೬ ರುಪಾಯಿಯಂತೆ, ವಿಧ್ಯಾರ್ಥಿಗಳಿಗೆ ಹಂಚಿದ ಎಲ್ಲ ಪ್ರಶ್ನೆಪತ್ರಿಕೆಗಳಿಗೂ ಅಲ್ಲ." ಎನ್ನುತ್ತದೆ.
ಪ್ರತಿ ಕಾಲೇಜಿನ ಪರೀಕ್ಷಾ ವಿಭಾಗ, ಪ್ರಶ್ನೆಪತ್ರಿಕೆಗಳನ್ನು ಪ್ರತಿ ಪುಟಕ್ಕೆ ೦.೩೫ ರುಪಾಯಿ ಅತಿ ಕಡಿಮೆ ಬೆಲೆಯಲ್ಲಿ ನಕಲು ಮಾಡಬಹುದಿತ್ತು, ಎಂದು ಈ ವರದಿ ಗಮನಿಸಿದೆ. ೨೦೦೯ ರಿಂದ ೨೦೧೨ ರವರೆಗೆ ೪ ವರ್ಷಗಳಿಗೆ ೬.೮೪ ಕೋಟಿ ದುಡ್ಡು ಪಾವತಿಸಿರುವುದರಿಂದ ಪ್ರತಿ ವರ್ಷ ೧.೫೫ ಕೋಟಿ ಹೆಚ್ಚುವರಿ ಪಾವತಿ ಮಾಡಿದಂತಾಗುತ್ತದೆ." ಎಂದು ವರದಿ ತಿಳಿಸಿದೆ.
ವಿಶ್ವವಿದ್ಯಾಲಯದ ಅಧಿಕಾರಿಕಗಳು ಹೇಳುವಂತೆ ಆ ಗುತ್ತಿಗಾರರಿಗೆ ಪ್ರಶ್ನೆಪತ್ರಿಕೆಯ ಸಾಫ್ಟ್ ಪ್ರತಿಯನ್ನು ತಮ್ಮ ಸರ್ವರ್ ನಲ್ಲಿಟ್ಟು, ಪ್ರತಿ ಕಾಲೇಜಿನವರು ಪರೀಕ್ಷೆಯ ದಿನ ಅಲ್ಲಿಗೆ ಲಾಗಿನ್ ಮಾಡಿ ಆ ಪ್ರಶ್ನೆಪತ್ರಿಕೆಯನ್ನು ಪಡೆದು ಪ್ರಿಂಟ್ ಮಾಡಲು ಸಹಾಯವಾಗುವಂತೆ ನೆಟ್ ವರ್ಕ್ ಒದಗಿಸುವುದಷ್ಟೇ ಆಗಿತ್ತು. ಈ ಏಜೆನ್ಸಿಗೆ ಕೊಟ್ಟಿರುವ ಹಣ ಕಾಲೇಜಿನಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಪ್ರಿಂಟ್ ಮಾಡಲು ಮತ್ತು ಅವುಗಳನ್ನು ನಕಲು ಮಾಡುವ ಪ್ರಕ್ರಿಯೆಯನ್ನು ಒಳಗೊಳ್ಳುವುದಿಲ್ಲ ಎಂದು ವಿವರಿಸುತ್ತಾರೆ.
೨೦೧೧-೨೦೧೨ ರಲ್ಲಿ ಹೊಸ ಪದ್ಧತಿಯನ್ನು ಪರಿಚಯಿಸಿದ್ದ ವಿ ಟಿ ಯು, ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಇ-ಮೇಲ್ ಮೂಲಕ ಕಳುಹಿಸಿ, ಅದನ್ನು ಪ್ರಿಂಟರ್ ನ ಬಫರ್ ಗೆ ಕಳುಹಿಸಲಾಗುತ್ತಿತ್ತು. ಅಲ್ಲಿ ಪರೀಕ್ಷಕೇಂದ್ರಕ್ಕೆ ಬೇಕಾದಷ್ಟೇ ಪ್ರಶ್ನೆಪತ್ರಿಕೆಗಳ ಪ್ರತಿಗಳನ್ನು ಅಲ್ಲಿ ಪ್ರಿಂಟ್ ಮಾಡಬಹುದು. ವಿ ಟಿ ಯು ಎಲ್ಲ ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರಿಂಟರ್ ಗಳು ಮತ್ತು ಟೋನರ್ ಗಳನ್ನು ಕೂಡ ಪೂರೈಸಿದೆ.
"ಸಿಎಜಿ ಯಿಂದ ಇದು ಒಳ್ಳೆಯ ವೀಕ್ಷಣೆ. ಕಾಲೇಜುಗಳಲ್ಲಿ ಪ್ರಿಂಟ್ ತೆಗೆದು ಬೇಕಾದಷ್ಟು ಪ್ರತಿಗಳನ್ನು ನಕಲು ಮಾಡಬಹುದಾಗಿದ್ದರಿಂದ ಆ ಗುತ್ತಿಗೆದಾರನಿಗೆ ಯಾಕಿಷ್ಟು ದುಡ್ಡು ಕೊಡಬೇಕಿತ್ತು" ಎನ್ನುತ್ತಾರೆ ಏಟ್ರಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲ ಡಾ. ಎಂ ಶಿವಕುಮಾರ್.