ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಸಿದ್ದು ಆಳ್ವಿಕೆಯಲ್ಲಿ ರೈತರ ಕಡೆಗಣನೆ: ಎಚ್ ಡಿ ಕೆ

ನೆರೆ ಮತ್ತು ಬರಗಳಿಗೆ ತತ್ತರಿಸಿರುವ ರೈತರ ಆತ್ಮವಿಶ್ವಾಸ ಹೆಚ್ಚಿಸುವಂತ ಯಾವುದೇ ಕಾರ್ಯಕ್ರಮಗಳನ್ನು ಸರ್ಕಾರ...

Updated On : 27 Oct 2014, 5:48 am

ಚಿಕ್ಕಮಗಳೂರು: ನೆರೆ ಮತ್ತು ಬರಗಳಿಗೆ ತತ್ತರಿಸಿರುವ ರೈತರ ಆತ್ಮವಿಶ್ವಾಸ ಹೆಚ್ಚಿಸುವಂತ ಯಾವುದೇ ಕಾರ್ಯಕ್ರಮಗಳನ್ನು ಕರ್ನಾಟಕ ಸರ್ಕಾರ ಹಾಕಿಕೊಂಡಿಲ್ಲ ಎಂದು ಜೆಡಿಎಸ್ ನಾಯಕ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಭಾನುವಾರ ಇಲ್ಲಿ ದೂರಿದ್ದಾರೆ.

ವರದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ "ರೈತರು ಎದುರಿಸುತ್ತಿರುವ ತೊಂದರೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನಾನು ಬರೆದ ಪತ್ರದ ಹೊರತಾಗಿಯೂ, ರೈತರಿಗೆ ರಾಜ್ಯ ಸರ್ಕಾರ ಏನೂ ಮಾಡಿಲ್ಲ" ಎಂದಿದ್ದಾರೆ.

ಪ್ರವಾಹದಿಂದ ತತ್ತರಿಸಿದ್ದ ಉತ್ತರ ಕರ್ನಾಟಕದ ಜಿಲ್ಲೆಗಳನ್ನು ಸುತ್ತಿ ಬಂದು ಸೆಪ್ಟಂಬರ್ ನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಪತ್ರ ಬರೆದಿದ್ದೆ ಎನ್ನುತ್ತಾರೆ ಕುಮಾರಸ್ವಾಮಿ.

ಸಿದ್ಧರಾಮಯ್ಯ ನಾಯಕತ್ವದ ಸದ್ಯದ ಈ ಸರ್ಕಾರ "ಸ್ವಾತಂತ್ರದ ನಂತರದ ಅತಿ ಸೋಮಾರಿ ಮತ್ತು ಅಸಮರ್ಥ ಸರ್ಕಾರ" ಎಂದಿದ್ದಾರೆ.

ನಮ್ಮ ಪಕ್ಷದಲ್ಲಿ ಯಾವುದೇ ಆಂತರಿಕ ಭಿನ್ನಾಭಿಪ್ರಾಯಗಳಿಲ್ಲ ಎಂದ ಕುಮಾರಸ್ವಾಮಿ, ಪಕ್ಷದ ಕೋರ್ ಸಮಿತಿಯನ್ನು ಸದಸ್ಯರು ಪಕ್ಷಕ್ಕೆ ನೀಡಿರುವ ಸೇವೆ, ಅನುಭವ ಮತ್ತು ನಿಷ್ಠೆಯ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ. ಪಕ್ಷದ ಅಧ್ಯಕ್ಷರನ್ನು ಒಳಗೊಂಡಂತೆ ಪಕ್ಷದ ಕಛೇರಿಯ ಇನ್ನಿತಿರ ಸ್ಥಾನಗಳನ್ನು ತುಂಬಲು ಎಚ್ ಡಿ ದೇವೇಗೌಡ ಅವರ ಅಧ್ಯಕ್ಷತೆಯಲ್ಲಿ ನವೆಂಬರ್ತ್ ೫ ರಂದು ಸಭೆ ನಡೆಯಲಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement