ಹಾಲಂಬಿಗೆ ದಿಗ್ಬಂಧನ
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಥಳ ಗೊಂದಲ ನಿವಾರಣೆಗಾಗಿ ಭಾನುವಾರ ಕರೆಯಲಾಗಿದ್ದ ಸಮನ್ವಯ....
ಹಾವೇರಿ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಥಳ ಗೊಂದಲ ನಿವಾರಣೆಗಾಗಿ ಭಾನುವಾರ ಕರೆಯಲಾಗಿದ್ದ ಸಮನ್ವಯ ಸಭೆ ಉದ್ದೇಶ ವೈಫಲ್ಯ ಕಂಡಿದೆ. ಸಭೆ ಮೊಟಕುಗೊಳಿಸಿ ಕಸಾಪ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ ಹೊರ ನಡೆದದ್ದರಿಂದ ಅಸಮಾಧಾನಗೊಂಡ ಕನ್ನಡ ಸಂಘಟನೆಗಳ ಕಾರ್ಯಕರ್ತರು ಅವರ ವಿರುದ್ಧ ಘೋಷಣೆ ಕೂಗಿ ದಿಗ್ಬಂಧನ ವಿಧಿಸಿದರು.
ಹಾಲಂಬಿ ಸಭೆಯಿಂದ ಹೊರ ಹೋಗುತ್ತಿದ್ದಂತೆ ಅವರನ್ನೇ ಹಿಂಬಾಲಿಸಿ ಬಂದ ಅನೇಕರು ಹಾವೇರಿಯಲ್ಲೇ ಸಮ್ಮೇಳನ ನಡೆಸುವಂತೆ ಒತ್ತಾಯಿಸಿದರು. ಇದರಿಂದ ಉದ್ವಿಗ್ನಗೊಂಡ 50ಕ್ಕೂ ಹೆಚ್ಚು ಜನ , ಕಾರು ಸುತ್ತುವರಿದು ಘೇರಾವ್ ಹಾಕಿದರು. ಇದರಿಂದ ಪರಿಸ್ಥಿತಿ ಮತ್ತಷ್ಟು ಬಿಗುವಾಯಿತು. ಕೊನೆಗೆ ಮಾಜಿ ಶಾಸಕ ಬಿ.ಸಿ ಪಾಟೀಲ ಮಧ್ಯಪ್ರವೇಶಿಸಿ ಹಾಲಂಬಿಯವರನ್ನು ಕಾರು ಹತ್ತಿಸಿದರು.