ಉಪ್ಪಾರ ಕ್ಷೇಮಾಭಿವೃದ್ಧಿ ಸಂಘದಿಂದ ವಿಜ್ಞಾನ ವಿವಿ ಕುಲಪತಿ ಡಾ.ರವೀಂದ್ರನಾಥ್ಗೆ ಸನ್ಮಾನ
ಕರ್ನಾಟಕ ರಾಜ್ಯ ಉಪ್ಪಾರ ಕ್ಷೇಮಾಭಿವೃದ್ಧಿ ವಿವಿದೋದ್ದೇಶ ಮತ್ತು ಗೃಹ
ಬೆಂಗಳೂರು: ಕರ್ನಾಟಕ ರಾಜ್ಯ ಉಪ್ಪಾರ ಕ್ಷೇಮಾಭಿವೃದ್ಧಿ ವಿವಿದೋದ್ದೇಶ ಮತ್ತು ಗೃಹ ನಿರ್ಮಾಣ ಸಹಕಾರ ಸಂಘದ ಆಶ್ರಯದಲ್ಲಿ ನವೆಂಬರ್ 16, 2014ರಂದು ಉಪ್ಪಾರ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಡಾ|| ರವೀಂದ್ರನಾಥ, ಕುಲಪತಿಗಳು, ರಾಜೀವಗಾಂಧಿ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಮತ್ತು ಸಮಾಜಕ್ಕೆ ದುಡಿದ ಹಿರಿಯ ಮುಖಂಡರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಹಾಗೂ ಈ ಸಮಾರಂಭದಲ್ಲಿ ಉಪ್ಪಾರರ ವಿಳಾಸದ ಕೈಪಿಡಿಯನ್ನು ಬಿಡುಗಡೆಗೊಳಿಸಲಿದೆ.
ಇದಕ್ಕೆ ಉಪ್ಪಾರ ಕುಲ ಬಾಂಧವರು ತಮ್ಮ ಹೆಸರು, ಪೂರ್ಣ ವಿಳಾಸ, ಹುದ್ದೆ, ದೂರವಾಣಿಯನ್ನು ಕೆಳಗಿನ ಮೊಬೈಲ್ ಸಂಖ್ಯೆ / ಇಮೇಲ್ -/ ಅಂಚೆ ಹಾಗೂ ಎಸ್.ಎಂ.ಎಸ್. ಮುಖಾಂತರ ಕಳುಹಿಸಲು ಕೋರಲಾಗಿದೆ.
ಸ್ಥಳ : ಮಂಗಳ ಮಂಟಪ ಅಡಿಟೋರಿಯಂ, ಎನ್.ಎಂ.ಕೆ.ಆರ್.ವಿ. ಪಿ.ಯು. ಕಾಲೇಜು ಕ್ಯಾಂಪಸ್, ಜಯನಗರ 3ನೇ ಬ್ಲಾಕ್, ಬೆಂಗಳೂರು-560011.
ಹೆಚ್ಚಿನ ಮಾಹಿತಿಗೆ : 080-26420121 ಎಸ್.ಬಿ. ಶಶಿಧರ್ : 9986151518, ಕೆ.ಪಿ. ರಮೇಶ್ : 9986934534. Email : ksuwhcs@gmail.com