ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ನಿತ್ಯಾನಂದ ಪ್ರಕರಣ ನ.26ಕ್ಕೆ ಮುಂದೂಡಿಕೆ

ಬಿಡದಿ ಧ್ಯಾನಪೀಠದ ನಿತ್ಯಾನಂದ ಸಹಿತ 6 ಮಂದಿ ವಿರುದ್ಧ ಸಿಐಡಿ...

Mainashree
Updated On : 28 Oct 2014, 9:17 am

ರಾಮನಗರ: ಬಿಡದಿ ಧ್ಯಾನಪೀಠದ ನಿತ್ಯಾನಂದ ಸಹಿತ 6 ಮಂದಿ ವಿರುದ್ಧ ಸಿಐಡಿ ದಾಖಲಿಸಿರುವ ರಾಸಲೀಲೆ, ಲೈಂಗಿಕ ಕಿರುಕುಳ ಪ್ರಕರಣದ ವಿಚಾರಣೆಯನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ 3ನೇ ಹೆಚ್ಚುವರಿ ಪೀಠವು ನ.26ಕ್ಕೆ ಮುಂದೂಡಿದೆ.

ಪ್ರಕರಣಧ ವಿಚಾರಣೆಗಾಗಿ ನಿತ್ಯಾನಂದ ತನ್ನ ಐವರು ಅನುಯಾಯಿಗಳಾದ ಶಿವವಲ್ಲಭ ನೇನಿ, ಗೋಪಾಲ ಶೀಲಂ ರೆಡ್ಡಿ, ಧನಶೇಖರನ್, ಜಮುನಾರಾಣಿ ಮತ್ತು ರಾಗಿಣಿ ಜತೆಗೂಡಿ ಸೋಮವಾರ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಿದ್ದರು. ಇದೇ ಪ್ರಕರಣದಡಿ ನಿತ್ಯಾನಂದ ಮತ್ತು ಇತರ ಐವರು ಆರೋಪಿಗಳು ಅ.15ರಂದು ಇದೇ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಅಂತೆಯೇ ಸಿಐಡಿ ವಶದಲ್ಲಿರುವ ದಾಖಲೆಗಳನ್ನು ಒದಗಿಸಲು ಕೋರಿ ವಕೀಲರ ಮೂಲಕ ಮನವಿ ಮಾಡಿದ್ದರು.

ಜಾಮೀನು ಮತ್ತು ದಾಖಲೆಗಳ ಕೋರಿಕೆಗೆ ಸಂಬಂಧಿಸಿದ ವಿಚಾರಣೆಯನ್ನು ನ.11ಕ್ಕೆ ಮುಂದೂಡಲಾಗಿದೆ. ಆಕ್ಷೇಪಣೆ ಸಲ್ಲಿಸುವುದಕ್ಕೆ ಸಿಐಡಿ ಪರ ವಕೀಲರಿಗೆ ಅಂದೇ ಅವಕಾಶ ನೀಡುವುದಾಗಿ ನ್ಯಾಯಾಧೀಶರಾದ ಮಂಜುಳಾ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement