ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ವರದಕ್ಷಿಣೆ ಕಿರುಕುಳ: ಆತ್ಮಹತ್ಯೆ ಮಾಡಿಕೊಂಡ ಯುವತಿ

ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ೩೦ ವರ್ಷದ ಯುವತಿ ಹುಳಿಮಾವಿನ ತನ್ನ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ...

Updated On : 28 Oct 2014, 2:00 am

ಬೆಂಗಳೂರು: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ೩೦ ವರ್ಷದ ಯುವತಿ ಹುಳಿಮಾವಿನ ತನ್ನ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆಪಾದಿಸಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.

ಮೃತಗೊಂಡ ಅಶ್ವಿನಿ, ಆನೇಕಲ್ ಗ್ರಾಮ ಪಂಚಾಯತಿಯ ಮಾಜಿ ಸದಸ್ಯ ಮತ್ತು ಕೇಬಲ್ ಆಪರೇಟರ್ ಪುಷ್ಪರಾಜು ಅವರನ್ನು ಮದುವೆಯಾಗಿದ್ದರು.

ಈ ದಂಪತಿಗೆ ಮೂರು ಜನ ಮಕ್ಕಳಿದ್ದಾರೆ.

ಪುಷ್ಪರಾಜು ಮಲಗಿದ್ದಾಗ ಈ ಘಟನೆ ನಡೆದಿದ್ದು, ಮಧ್ಯರಾತ್ರಿಯಲ್ಲಿ ಎದ್ದಾಗ ತನ್ನ ಹೆಂಡತಿ ನೇಣು ಹಾಕಿಕೊಂಡಿರುವುದನ್ನು ನೋಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದು ಹೋಗಿದ್ದಾರೆ ಪುಷ್ಪರಾಜು, ಆದರೆ ಆಸ್ಪತ್ರೆಯಲ್ಲಿ ಅಶ್ವಿನಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ನಂತರ ಪುಷ್ಪರಾಜು ತನ್ನ ಹೆಂಡತಿಯ ದೇಹವನ್ನು ಆಸ್ಪತ್ರೆಯಲ್ಲೇ ಬಿಟ್ಟು ತೆರಳಿದ್ದಾನೆ.

ಪೋಲೀಸ್ ಸಿಬ್ಬಂದಿ ತಕ್ಷಣ ಎಚ್ಚರಗೊಂಡು ಆರೋಪಿಯನ್ನು ಹಿಡಿಯುವಲ್ಲಿ ಸಫಲರಾಗಿದ್ದಾರೆ.

ಅಶ್ವಿನಿಯವರ ತಂದೆ ಯಲ್ಲಪ್ಪ, ವರದಕ್ಷಿಣೆಗಾಗ ಹಲವು ಬಾರಿ ಆಗ್ರಹಿಸಿದ್ದಕ್ಕಾಗಿ ಪುಷ್ಪರಾಜು ಅವರ ಮೇಲೆ ಮೊಕದ್ದಮೆ ಹೂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement